ಬಾಣಂತಿ‌ ಮಹಿಳೆಗೆ ಸಹಾಯ: ಮಾನವೀಯತೆಗೆ ಸಾಕ್ಷಿಯಾದ ಬಳ್ಳಾರಿ ಪೋಲಿಸರು

ಆಟೋ ಕರೆಸಿ ಊರ ಹೊರವಲಯದ ಬಸ್ ನಿಲ್ದಾಣಕ್ಕೆ ಬಾಣಂತಿ‌ ಮಹಿಳೆಯನ್ನ ಕಳುಹಿಸಿದ ಪೊಲೀಸರು| ಆಂಧ್ರ ಮೂಲದ ಬಾಗೇಪಲ್ಲಿ ಮೂಲದ ಕುಟುಂಬಕ್ಕೆ ಆಸರೆಯಾದ ಪೊಲೀಸರು| ಆಟೋ ಹಾಗೂ ಊರಿಗೆ ತೆರೆಳಲು ಬಸ್ ಇಲ್ಲದೇ‌ ಪರದಾಡುತ್ತಿದ್ದ ಬಾಣಂತಿ‌| 
 

Share this Video
  • FB
  • Linkdin
  • Whatsapp

ಬಳ್ಳಾರಿ(ಏ.25): ಬಿಸಿಲ ಧಗೆಯಲ್ಲಿ‌ ಆಟೋ ಹಾಗೂ ಊರಿಗೆ ತೆರೆಳಲು ಬಸ್ ಇಲ್ಲದೇ‌ ಪರದಾಡುತ್ತಿದ್ದ ಬಾಣಂತಿ‌ ಮಹಿಳೆಗೆ ಸಹಾಯ ಮಾಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದ ಘಟನೆ ಇಂದು(ಭಾನುವಾರ) ನಡೆದಿದೆ. ಹೌದು, ಆಟೋ ಕರೆಸಿ ಊರ ಹೊರವಲಯದ ಬಸ್ ನಿಲ್ದಾಣಕ್ಕೆ ಬಾಣಂತಿ‌ ಮಹಿಳೆಯನ್ನ ಪೊಲೀಸರು ಕಳುಹಿಸಿದ್ದಾರೆ.

ಗದಗ: ಚರಂಡಿಯಲ್ಲಿ ಕಸ, ಮನೆಯವರಿಗೆ ತುಂಬುವ ಕೆಲಸ..!

ನಗರದ ವಿಮ್ಸ್ ಅಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಕುಟುಂಬದ ಸದಸ್ಯರಿಗೆ ಆಸ್ಪತ್ರೆಯಿಂದ ನಿಲ್ದಾಣಕ್ಕೆ ಬರಲು ಆಟೋ ಸಿಕ್ಕಿರಲಿಲ್ಲ. ಹೀಗಾಗಿ ನಗರದ ರಾಯಲ್ ವೃತ್ತದಲ್ಲಿ ಬಂದ ಕುಟುಂಬಕ್ಕೆ ಆಟೋ ಕರೆಸಿ ಬಸ್‌ ನಿಲ್ದಾಣಕ್ಕೆ ಪೊಲೀಸರು ಕಳುಹಿಸಿದ್ದಾರೆ. ಈ ಮೂಲಕ ಆಂಧ್ರ ಮೂಲದ ಬಾಗೇಪಲ್ಲಿ ಮೂಲದ ಕುಟುಂಬಕ್ಕೆ ಪೊಲೀಸರು ಆಸರೆಯಾಗಿದ್ದಾರೆ.

Related Video