ಗದಗ: ಚರಂಡಿಯಲ್ಲಿ ಕಸ, ಮನೆಯವರಿಗೆ ತುಂಬುವ ಕೆಲಸ..!
ಗದಗ ನಗರಸಭೆ ಆಯುಕ್ತ ರಮೇಶ್ ಜಾಧವ್ ಅವರು ಮಾಸ್ಕ್ ಬಗ್ಗೆ ಜಾಗೃತಿ| ಸ್ವಚ್ಛತೆ ಬಗ್ಗೆ ಪಾಠ ಮಾಡಿ ಮತ್ತೆ ಗಟಾರಿನಲ್ಲಿ ಕಸ ಹಾಕದಂತೆ ಸೂಚನೆ| ವೀಕೆಂಡ್ ಕರ್ಫ್ಯೂ ವೇಳೆ ಸ್ವಚ್ಛತೆ ಪಾಠ|
ಗದಗ(ಏ.25): ಮನೆಯ ಎದುರಿನ ಚರಂಡಿಯಲ್ಲಿ ಕಸ ಸುರಿದ ಮನೆಯವರಿಂದಲೇ ನಗರಸಭೆ ಅಧಿಕಾರಿಗಳ ತಂಡ ಕಸ ತುಂಬಿಸಿದ ಘಟನೆ ಇಂದು(ಭಾನುವಾರ) ನಡೆದಿದೆ. ವೀಕೆಂಡ್ ಕರ್ಫ್ಯೂ ವೇಳೆ ನಗರಸಭೆ ಪೌರಾಯುಕ್ತ ರಮೇಶ್ ಜಾಧವ್ ಅವರು ನಗರದ ಜನತೆಗೆ ಸ್ವಚ್ಛತೆಯ ಪಾಠವನ್ನ ಮಾಡಿದ್ದಾರೆ.
ಕರ್ಫ್ಯೂ ವೇಳೆ ಊಟ ತಯಾರಿಸಿ ಹಸಿದವರ ಹೊಟ್ಟೆ ತುಂಬಿಸಿದ ಮಹಿಳೆ
ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಆಯುಕ್ತ ರಮೇಶ್ ಜಾಧವ್ ಅವರು ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಫೀಲ್ಡಿಗಿಳಿದಿದ್ದಾರೆ. ನಗರದ ಸರಾಫ್ ಬಜಾರ್ ಬಳಿ ಜನರಿಗೆ ಜಾಗೃತಿ ಮೂಡಿಸಲು ರಮೇಶ್ ಜಾಧವ್ ಬಂದಿದ್ದರು, ಈ ವೇಳೆ ಮನೆಯ ಎದುರಿನ ಚರಂಡಿಯಲ್ಲಿ ಬಾಲಕನೊಬ್ಬ ಕಸವನ್ನ ಸುರಿದಿದ್ದಾನೆ. ಈ ವೇಳೆ ನಗರಸಭೆ ಅಧಿಕಾರಿಗಳ ತಂಡ ಮನೆಯವರಿಂದಲೇ ಕಸವನ್ನ ತುಂಬಿಸಿದ್ದಾರೆ. ಸ್ವಚ್ಛತೆ ಬಗ್ಗೆ ಪಾಠ ಮಾಡಿ ಮತ್ತೆ ಗಟಾರಿನಲ್ಲಿ ಕಸ ಹಾಕದಂತೆ ಸೂಚನೆ ನೀಡಿದ್ದಾರೆ.