ಕೋವಿಡ್‌-19 ವಿರುದ್ಧ ಹೋರಾಟ: ಇಂದಿನಿಂದ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್‌ ಆರಂಭ

ರಾಜ್ಯಾದ್ಯಂತ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್‌ ಚಿಕಿತ್ಸೆ ಆರಂಭ| ಬಿಎಂಸಿಆರ್‌ಐ ಮತ್ತು ಹೆಚ್‌ಸಿಜಿ ಸಜಯೋಗದಲ್ಲಿ ಲ್ಯಾಬ್‌ ಸಿದ್ಧ| ಕೋವಿಡ್‌-19 ಗುಣಮುಖರಿಂದ ಪ್ಲಾಸ್ಮಾ ದಾನ| ವೆಂಟಿಲೇಟರ್‌ ಸಪೋರ್ಟ್‌ನಲ್ಲಿರುವ ಐದು ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ|

First Published Apr 25, 2020, 12:22 PM IST | Last Updated Apr 25, 2020, 12:22 PM IST

ಬೆಂಗಳೂರುಏ.25): ಮಹಾಮಾರಿ ಕೊರೋನಾ ಸೋಂಕಿನಿಂದ ಮುಕ್ತಿ ಪಡೆಯಲು ನೆರವಾಗುವ ನಿಟ್ಟಿನಲ್ಲಿ ಇಂದಿನಿಂದ(ಶನಿವಾರ) ರಾಜ್ಯಾದ್ಯಂತ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್‌ ಚಿಕಿತ್ಸೆ ಆರಂಭವಾಗಿದೆ. ಬೆಂಗಳೂರಿನ ಬಿಎಂಸಿಆರ್‌ಐ ಮತ್ತು ಹೆಚ್‌ಸಿಜಿ ಸಜಯೋಗದಲ್ಲಿ ಲ್ಯಾಬ್‌ ಆರಂಭವಾಗಿದೆ. 

ಕೊರೋನಾ ನಿವಾರಣೆಗಾಗಿ ಮಹಾರುದ್ರಯಾಗ; ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಭಾಗಿ

ಇಬ್ಬರು ಕೋವಿಡ್‌-19 ಗುಣಮುಖರಿಂದ ಪ್ಲಾಸ್ಮಾ ದಾನ ಸಿಕ್ಕಿದೆ.  ಕೊರೋನಾ ಸೋಂಕು ಬಂದು ನಂತರ ಗುಣಮುಖರಾದಂತವರ ರಕ್ತದಿಂದ ಪ್ಲಾಸ್ಮಾ ತೆಗೆದುಕೊಂಡು, ಆ ಪ್ಲಾಸ್ಮಾ ಮೂಲಕ ರೋಗಿಗಳಿಗೆ ಚಿಕಿತ್ಸೆ ಕೊಡುವಂತ ಟ್ರಯಲ್‌ ಆರಂಭವಾಗಿದೆ. ಕೇವಲ ಮೂರೇ ಗಂಟೆಗಳಲ್ಲಿ ಪ್ಲಾಸ್ಮಾ ಪ್ರಕ್ರಿಯೆ ಮುಗಿಯಲಿದೆ. ವೆಂಟಿಲೇಟರ್‌ ಸಪೋರ್ಟ್‌ನಲ್ಲಿರುವ ಐದು ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಕೊಡಲಾಗುತ್ತದೆ.