ಹೆಸರು ಮಾತ್ರ ಬೋರಯ್ಯ..! ಇವರ ಕೃಷಿ ಸಾಧನೆ ಸಖತ್ ಇಂಟ್ರೆಸ್ಟಿಂಗ್

ಅಂಗವೈಕಲ್ಯ ಬೋರಯ್ಯ ಅವರಿಗೆ ಒಂದು ಸಮಸ್ಯೆಯೇ ಅಲ್ಲ. ಕುಂಟುತ್ತಲೇ ಜಮೀನೆಲ್ಲವನ್ನೂ ನೋಡಿಕೊಳ್ಳೋ, ಕೃಷಿ ಮಾಡೋ ಬೋರಯ್ಯನ ಸ್ಟೋರಿ ಮಾತ್ರ ಸಖತ್ ಇಂಟ್ರೆಸ್ಟಿಂಗ್..

First Published Nov 9, 2021, 10:26 AM IST | Last Updated Nov 9, 2021, 10:57 AM IST

ಚಿತ್ರದುರ್ಗ(ನ.09): ಅಂಗವೈಕಲ್ಯ ಎಂಬುದು ನೋವು, ಅಸಹಾಯಕತೆ, ತೊಡಕು ಎಂಬ ಮನಸ್ಥಿತಿ ನಮ್ಮಲ್ಲಿ ಈಗಲೂ ಇದೆ. ಆದರೆ ಇದೆಲ್ಲವೂ ಅಂದುಕೊಂಡವರಿಗಷ್ಟೇ.. ಎಲ್ಲವೂ ಮನಸಿನ ಛಲದ ಮೇಲೆಯೇ ಅವಲಂಬಿಸಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಚಿತ್ರದುರ್ಗದ(Chitradurga) ಬೋರಯ್ಯ.

ಪುತ್ತೂರಿನಲ್ಲಿ ಎಂಜಿನಿಯರಿಂಗ್‌ ಪದವೀಧರನ ಕೃಷಿ ಸಾಧನೆ

ಬೋರಯ್ಯ ಯಾರಿಗೂ ಹೊರೆಯಾಗದೆ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಜಮೀನಿನ ತುಂಬಾ ಬಹಳಷ್ಟು ಬಗೆಯ ಕೃಷಿ(Agriculture) ಮಾಡಿದ್ದಾರೆ. ಹಚ್ಚ ಹಸಿರು ಹೊಲವನ್ನು ನೋಡಿಕೊಂಡು ಪ್ರೀತಿಯ ಕುದುರೆಯನ್ನು ಸಾಕುತ್ತಾ ಮೇಕೆಗಳನ್ನು ಸಾಕುತ್ತಾರೆ. ಮೆಕ್ಕೆ ಜೋಳ ಪ್ರಮುಖ ಬೆಳೆ, ಅಷ್ಟೇ ಅಲ್ಲ ಹುರುಳಿ, ಈರುಳ್ಳಿ ಸೇರಿ ಹಲವಾರು ಬಗೆಯ ತರಕಾರಿ ಧಾನ್ಯಗಳನ್ನು ಬೆಳೆದು ಜೀವನ ಸಾಗಿಸುತ್ತಾರೆ.