ಈ ಸರ್ಕಾರ ಕೇವಲ ಹೆಣ್ಣು ಮಕ್ಕಳ ಸರ್ಕಾರದಂತೆ ವರ್ತಿಸುತ್ತಿದೆ: ತೈಲ ಬೆಲೆ ಏರಿಕೆಗೆ ವಾಹನ ಸವಾರರ ಆಕ್ರೋಶ

ತೈಲ ಬೆಲೆ ಏರಿಕೆಯಿಂದ ಇತರೆ ವಸ್ತುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಸರ್ಕಾರ ಕೇವಲ ಹೆಣ್ಣು ಮಕ್ಕಳ ಸರ್ಕಾರದಂತೆ ವರ್ತಿಸುತ್ತಿದೆ ಎಂದು ವಾಹನ ಸವಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

First Published Jun 16, 2024, 11:41 AM IST | Last Updated Jun 16, 2024, 11:41 AM IST

ಬೆಳಗಾವಿ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರದಿಂದ ದಿಢೀರ್ ತೈಲ ಬೆಲೆ ಏರಿಕೆ ಮಾಡಿದ ಹಿನ್ನೆಲೆ ಬೆಳಗಾವಿಯಲ್ಲಿ(Belagavi) ವಾಹನ ಸವಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಸರ್ಕಾರ ಕೇವಲ ಹೆಣ್ಣು ಮಕ್ಕಳ ಸರ್ಕಾರದಂತೆ ವರ್ತಿಸುತ್ತಿದೆ. ಗ್ಯಾರಂಟಿ ಯೋಜನೆಗಳನ್ನು(Guarantee scheme) ನೀಡಲು ಸರ್ಕಾರ ಈಗ ಏಕಾಏಕಿ ಬೆಲೆ ಏರಿಕೆ(Petrol diesel Prices rises) ಮಾಡಿದೆ. ಮೊದಲು ಮಾಹಿತಿ ನೀಡದೇ ಡಿಸೇಲ್ ಹಾಗೂ ಪೆಟ್ರೋಲ್ ದರ ಹೆಚ್ಚಿಸಿರುವುದು ಸರಿಯಲ್ಲ. ತೈಲ ಬೆಲೆ ಏರಿಕೆಯಿಂದ ಇತರೆ ವಸ್ತುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಸರ್ಕಾರ ಮಧ್ಯಮ ವರ್ಗದ ಜನರಿಗೆ ಹೊರೆ ಮಾಡಲು ಮುಂದಾಗುತ್ತಿದೆ. ಸರ್ಕಾರ ತಕ್ಷಣವೇ ತೈಲ ಬೆಲೆ ಏರಿಕೆ ನಿರ್ಧಾರ ಹಿಂಪಡೆಯಬೇಕು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ದಕ್ಷಿಣ ಭಾರತ ಉತ್ಸವ 2024.. ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್