ವಿದ್ಯುತ್ ಕಂಬ ಹತ್ತಿ ಹೈಡ್ರಾಮಾ ಮಾಡಲು ಹೋದ ವ್ಯಕ್ತಿ ಸಾವು

ಹೈಡ್ರಾಮಾ ಮಾಡಲು ಹೋಗಿದ್ದ ವ್ಯಕ್ತಿಯನ್ನು ಸ್ಥಳೀಯರು ಮನವೊಲಿಸಿ ಕೆಳಗಿಳಿಯುವಂತೆ ಮನವಿ ಮಾಡಿಕೊಂಡಿಕ್ಕೊಂಡಿದ್ದಾರೆ. ಸ್ಥಳೀಯರ ಮಾತು ಕೇಳಿ ರೈಲ್ವೇ ವಿದ್ಯುತ್ ಕಂಬದಿಂದ ಕೆಳಗಿಳಿಯುವ ವೇಳೆಯಲ್ಲಿ ಕರೆಂಟ್ ಶಾಕ್ ಹೊಡೆದಿದೆ.

First Published Jun 2, 2020, 1:31 PM IST | Last Updated Jun 2, 2020, 1:31 PM IST

ರಾಯಚೂರು(ಜೂ.02): ನನ್ನನ್ನು ಮನೆಗೆ ಕಳಿಸಿ ಎಂದು ರೈಲ್ವೇ ವಿದ್ಯುತ್ ಕಂಬವೇರಿ ಹೈಡ್ರಾಮಾ ಮಾಡಲು ಹೋಗಿ ಸುಟ್ಟು ಕರಕಲಾದ ಘಟನೆ ನಗರದ ಅರಬ್ ಮೊಗಲ್ಲಾದ ಒಳ ಸೇತುವೆ ಬಳಿ ನಡೆದಿದೆ.

ಹೈಡ್ರಾಮಾ ಮಾಡಲು ಹೋಗಿದ್ದ ವ್ಯಕ್ತಿಯನ್ನು ಸ್ಥಳೀಯರು ಮನವೊಲಿಸಿ ಕೆಳಗಿಳಿಯುವಂತೆ ಮನವಿ ಮಾಡಿಕೊಂಡಿಕ್ಕೊಂಡಿದ್ದಾರೆ. ಸ್ಥಳೀಯರ ಮಾತು ಕೇಳಿ ರೈಲ್ವೇ ವಿದ್ಯುತ್ ಕಂಬದಿಂದ ಕೆಳಗಿಳಿಯುವ ವೇಳೆಯಲ್ಲಿ ಕರೆಂಟ್ ಶಾಕ್ ಹೊಡೆದಿದೆ.

LPG ಸಿಲಿಂಡರ್ ಬೆಲೆ ಭಾರೀ ಏರಿಕೆ, ಪರಿಷ್ಕೃತ ದರ ಇಂದಿನಿಂದಲೇ ಜಾರಿ!

ವಿದ್ಯುತ್ ಶಾಕ್ ಹೊಡೆಯುತ್ತಿದ್ದಂತೆ ಆ ವ್ಯಕ್ತಿ ನೋಡನೋಡುತ್ತಿದ್ದಂತೆ ತಂತಿಯಲ್ಲೇ ಸುಟ್ಟು ಕರಕಲಾಗಿ ಹೋಗಿದ್ದಾನೆ. ಈ ವ್ಯಕ್ತಿಯ ಹೆಸರು, ವಿಳಾಸ ಹಾಗೆಯೇ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ರಾಯಚೂರು ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ, ನೀರು ಹಾಗೂ ಕರೆಂಟ್ ಜತೆ ಚೆಲ್ಲಾಟವಾಡಬಾರದು ಎನ್ನುವುದಕ್ಕೆ ಇದು ಜೀವಂತ ಉದಾಹರಣೆ. ಏನೋ ಮಾಡಲು ಹೋಗಿ ಈ ವ್ಯಕ್ತಿ ಜೀವ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.