Asianet Suvarna News Asianet Suvarna News

LPG ಸಿಲಿಂಡರ್ ಬೆಲೆ ಭಾರೀ ಏರಿಕೆ, ಪರಿಷ್ಕೃತ ದರ ಇಂದಿನಿಂದಲೇ ಜಾರಿ!

ಒಂದೆಡೆ ಲಾಕ್‌ಡೌನ್ ನಿಧಾನವಾಗಿ ಸಡಿಲಗೊಳಿಸಲಾಗುತ್ತಿದೆ. ಹೀಗಿರುವಾಗ ಮೂರು ತಿಂಗಳ ಇಳಿಕೆಯ ಬಳಿಕ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರವನ್ನು ಕೇಂದ್ರ ಸರ್ಕಾರ ಸೋಮವಾರ ಏರಿಕೆ ಮಾಡಿದೆ.

ಬೆಂಗಲೂರು(ಜೂ.02): ಒಂದೆಡೆ ಲಾಕ್‌ಡೌನ್ ನಿಧಾನವಾಗಿ ಸಡಿಲಗೊಳಿಸಲಾಗುತ್ತಿದೆ. ಹೀಗಿರುವಾಗ ಮೂರು ತಿಂಗಳ ಇಳಿಕೆಯ ಬಳಿಕ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರವನ್ನು ಕೇಂದ್ರ ಸರ್ಕಾರ ಸೋಮವಾರ ಏರಿಕೆ ಮಾಡಿದೆ.

ಇದರಿಂದಾಗಿ ಸಬ್ಸಿಡಿ ರಹಿತ ಸಿಲಿಂಡರ್‌ ದರ ಬೆಂಗಳೂರಿನಲ್ಲಿ 596.50 ರು. ಆಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸರ್ಕಾರ ಸಬ್ಸಿಡಿ ರಹಿತ ಸಿಲಿಂಡರ್‌ ದರವನ್ನು 277 ರು. ಇಳಿಕೆ ಮಾಡಲಾಗಿತ್ತು. ಇದೇ ವೇಳೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸತತ 78ನೇ ದಿನವೂ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇನ್ನು ವಿಮಾನ ಇಂಧನ ದರದಲ್ಲಿ ಶೇ.56.5ರಷ್ಟುಭಾರೀ ಏರಿಕೆ ಮಾಡಲಾಗಿದೆ. ಹೀಗಾಗಿ ವೈಮಾನಿಕ ಇಂಧನ ಪ್ರತಿ ಕಿಲೋಲೀಟರ್‌ (1000 ಲೀಟರ್‌)ಗೆ 12,126 ರು. ಏರಿಕೆ ಆಗಿದ್ದು, 33,575 ರು. ತಲುಪಿದೆ.