ಬೆಂಗಳೂರಿನಲ್ಲಿ ದುಡ್ಡಿನ ಸುರಿಮಳೆ: ಹಣ ಎಸೆದ ವ್ಯಕ್ತಿ ಹೇಳಿದ್ದೇನು?

ರಾಜಧಾನಿ ಬೆಂಗಳೂರಿನಲ್ಲಿ ದುಡ್ಡಿನ ಮಳೆ ಸುರಿದಿದ್ದು, ಏಕಾಏಕಿ ಆಗಸದಿಂದ ಗರಿಗರಿ ನೋಟುಗಳು ತೇಲಿ ಬಂದಿವೆ.

Share this Video
  • FB
  • Linkdin
  • Whatsapp

ಬೆಂಗಳೂರಿನ ಕೆ.ಆರ್‌ ಮಾರ್ಕೆಟ್‌ನಲ್ಲಿ 10 ರೂಪಾಯಿ ಮುಖಬೆಲೆಯ ನೋಟು ಎಸೆದು ವ್ಯಕ್ತಿ ಪರಾರಿಯಾಗಿದ್ದಾನೆ. ಅರುಣ ನಿಂದ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣ ಎಸೆಯಲಾಗಿದ್ದು, ಹಣ ಬಾಚಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಕೆ.ಆರ್ ಮಾರ್ಕೇಟ್ ಪೊಲೀಸರು ಸ್ಥಳಕ್ಕೆ‌ ದೌಡಾಯಿಸಿದ್ದು, ಹಣ ಎಸೆದ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಸುವರ್ಣ ನ್ಯೂಸ್ ಜೊತೆ ಹಣ ಎಸೆದ ಅರುಣ್ ಮಾತನಾಡಿದ್ದು, ನಾನು ರೀಲ್ಸ್ ಮಾಡುವ ಪ್ರಯತ್ನ ಮಾಡಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರು ಮಾತಾಡಿದ್ರು, ಸಮಯ ಕೇಳಿದ್ದೇನೆ. ನನಗೆ ಸ್ವಲ್ಪ ಸಮಯ ಕೊಟ್ರೆ ಎಲ್ಲಾ ಪ್ರಶ್ನೆಗೆ ಉತ್ತರ ಕೊಡ್ತೇನೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಬುರಗಿಯಲ್ಲಿ ಸಿಎಂ ಬೊಮ್ಮಾಯಿಗೆ ಸ್ವಾಗತ ಕೋರಿ ಆರ್‌.ಡಿ ಪಾಟೀಲ್‌ ಬ್ಯಾನರ್‌

Related Video