ಹುಮನಾಬಾದ್‌: ಕೊರೋನಾ ಗೆದ್ದವನನ್ನ ಬಲಿ ಪಡೆದ ಬ್ಲ್ಯಾಕ್‌ ಫಂಗಸ್‌

* ಕೊರೋನಾ ಗೆದ್ದವನ್ನ ಬಲಿ ಪಡೆದ ಬ್ಲ್ಯಾಕ್‌ ಫಂಗಸ್‌ 
* ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಕೊರೋನಾದಿಂದ ಗುಣಮುಖರಾಗಿದ್ದ ಧರ್ಮರೆಡ್ಡಿ
* ಹೈದರಾಬಾದ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Share this Video
  • FB
  • Linkdin
  • Whatsapp

ಬೀದರ್‌(ಮೇ.20): ಮಹಾಮಾರಿ ಕೊರೋನಾ ಗೆದ್ದವನ್ನ ಬ್ಲ್ಯಾಕ್‌ ಫಂಗಸ್‌ ಬಲಿ ಪಡೆದಿದೆ. ಹೌದು, ಜಿಲ್ಲೆಯ ಹುಮನಾಬಾದ್‌ನ ಜಗನ್ನಾಥ್‌ ಧರ್ಮರೆಡ್ಡಿ ಎಂಬುವರೇ ಬ್ಲ್ಯಾಕ್‌ ಫಂಗಸ್‌ನಿಂದ ಸಾವಪ್ಪಿದ ವ್ಯಕ್ತಿಯಾಗಿದ್ದಾರೆ. ಧರ್ಮರೆಡ್ಡಿ ಅವರು ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಕೊರೋನಾದಿಂದ ಗುಣಮುಖರಾಗಿದ್ದರು. ಆದ್ರೆ ಬ್ಲ್ಯಾಕ್‌ ಫಂಗಸ್‌ ದಾಳಿಯಿಂದಾಗಿ ಜಗನ್ನಾಥ್‌ ಧರ್ಮರೆಡ್ಡಿ ಕಣ್ಣು ಕಳೆದುಕೊಂಡಿದ್ದರು. ಹೈದರಾಬಾದ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. 

ಬಾಗಲಕೋಟೆಯಲ್ಲಿ 9, ಬೆಂಗಳೂರಿನಲ್ಲಿ 14 ಮಂದಿಗೆ ಬ್ಲ್ಯಾಕ್ ಫಂಗಸ್

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video