Asianet Suvarna News Asianet Suvarna News

ಮಹಾಮಾರಿ ಕೊರೋನಾ ಮರೆತು ಶಾಪಿಂಗ್‌ನಲ್ಲಿ ಗ್ರಾಹಕರು ಬ್ಯುಸಿ...!

Nov 15, 2020, 12:12 PM IST

ಬೆಂಗಳೂರು(ನ.15): ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜನರು ಮೈಮರೆತು ಶಾಪಿಂಗ್‌ನಲ್ಲಿ ತೊಡಗಿದ್ದಾರೆ. ಹೌದು, ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ಮುಗಿಬಿದ್ದಿದ್ದಾರೆ. ಮಹಾಮಾರಿ ಕೊರೋನಾ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. 

ಬಾಗಲಕೋಟೆ: ದೀಪಾವಳಿ ಖರೀದಿಯಲ್ಲಿ ಮುಗಿಬಿದ್ದ ಜನ, ಮಾಸ್ಕ್‌ ಇಲ್ಲ, ಸಾಮಾಜಿಕ ಅಂತರವೂ ಇಲ್ಲ..!

ಮಾರ್ಕೆಟ್‌ನಲ್ಲಿ ಜನರು ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಎಲ್ಲರೂ ಒಬ್ಬರಿಗೊಬ್ಬರು ಅಂಟಿಕೊಂಡು ಶಾಪಿಂಗ್‌ ಮಾಡೋದ್ರಲ್ಲಿ ಜನರು ಫುಲ್‌ ಬ್ಯುಸಿಯಾಗಿದ್ದಾರೆ. ಕೊರೋನಾ ವೈರಸ್‌ ಇನ್ನೂ ಹೋಗಿಲ್ಲ ಎಂಬ ಸಾಮಾನ್ಯ ಪ್ರಜ್ಞೆ ಕೂಡ ಜನರಲ್ಲಿ ಕಾಣಿಸುತ್ತಿಲ್ಲ. 
 

Video Top Stories