Asianet Suvarna News Asianet Suvarna News

ಬಾಗಲಕೋಟೆ: ದೀಪಾವಳಿ ಖರೀದಿಯಲ್ಲಿ ಮುಗಿಬಿದ್ದ ಜನ, ಮಾಸ್ಕ್‌ ಇಲ್ಲ, ಸಾಮಾಜಿಕ ಅಂತರವೂ ಇಲ್ಲ..!

ಕೋವಿಡ್‌ ನಿಯಮ ಗಾಳಿಗೆ ತೂರಿದ ಜನ| ಬಾಗಲಕೋಟೆ ಮಾರ್ಕೆಟ್‌ನಲ್ಲಿ ಜನವೋ ಜನ| ಮಹಾಮಾರಿ ಕೊರೋನಾಗೆ ಡೋಂಟ್‌ ಕೇರ್‌ ಎನ್ನುತ್ತಿರುವ ಬಾಗಲಕೋಟೆ ಮಂದಿ| 

ಬಾಗಲಕೋಟೆ(ನ.15): ಮಾಸ್ಕ್‌ ಇಲ್ಲ, ಸಾಮಾಜಿಕ ಅಂತರವೂ ಇಲ್ಲ ಎಲ್ಲವನ್ನೂ ಗಾಳಿಗೆ ತೂರಿದ ಜನರು ದೀಪಾವಳಿ ಹಬ್ಬದ ಖರೀದಿ ಭರಾಟೆಯಲ್ಲಿ ನಿರತರಾಗಿದ್ದಾರೆ. ಹೌದು, ನಗರದ ಮಾರುಕಟ್ಟೆಯಲ್ಲಿ ಜನರಿಗೆ ಕೊರೋನಾ ಭಯ ಇಲ್ವೇನೋ ಅನ್ಸುತ್ತೆ. 

ದೀಪದಿಂದ ದೀಪವ ಹಚ್ಚಿ ಮನೆ, ಮನದಲ್ಲಿನ ಅಂಧಕಾರವನ್ನು ಓಡಿಸೋಣ ಬನ್ನಿ!

ಹೂವು, ಹಣ್ಣು ಖರೀದಿಯಲ್ಲಿ ಜನರು ಮುಗಿಬಿದ್ದಿದ್ದಾರೆ. ಇವರಿಗೆ ಯಾರಿಗೂ ಮಹಾಮಾರಿ ಕೊರೋನಾ ವೈರಸ್‌ ಭಯಾನೇ ಇಲ್ಲ. ಹಾಗೆ ಜನರು ವರ್ತಿಸುತ್ತಿದ್ದಾರೆ. 
 

Video Top Stories