Asianet Suvarna News Asianet Suvarna News

BIG 3: ಇಲ್ಲಿ ಎಲ್ಲಿ ನೋಡಿದ್ರೂ ಕಸ.. ಕಸ.. ಕಸ..! ವಾಸನೆ ತಾಳಲಾರದೇ ಸ್ಥಳಿಯರೆಲ್ಲಾ ನಿತ್ಯ ಆಕ್ರೋಶ!

ಕೊಡಗು ಜಿಲ್ಲೆ ಎಂದರೆ ತನ್ನ ಪ್ರಕೃತಿ ಸೌಂದರ್ಯದಿಂದ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸದಾ ಸೆಳೆಯುತ್ತದೆ. ಆದ್ರೆ ಇಲ್ಲಿ ಇದೀಗ ಎದುರಾಗಿರುವ ಸಮಸ್ಯೆ ಇಡೀ ಕೊಡಗು ಜಿಲ್ಲಾಡಳಿತವನ್ನೇ ತಲೆ ತಗ್ಗಿಸುವಂತೆ ಮಾಡಿದೆ. 

ಕೊಡಗು(ಜ.27):  ಕೊಡಗು ಜಿಲ್ಲೆ ಎಂದರೆ ತನ್ನ ಪ್ರಕೃತಿ ಸೌಂದರ್ಯದಿಂದ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸದಾ ಸೆಳೆಯುತ್ತದೆ. ಆದ್ರೆ ಇಲ್ಲಿ ಇದೀಗ ಎದುರಾಗಿರುವ ಸಮಸ್ಯೆ ಇಡೀ ಕೊಡಗು ಜಿಲ್ಲಾಡಳಿತವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಇಲ್ಲಿನ ಗ್ರಾಮಾಡಳಿತದ ಅದೊಂದು ಬೇಜವಾಬ್ದಾರಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. .

ಟಿಕೆಟ್ ಸಿಗದಿದ್ರೂ ಬಿಜೆಪಿ ಬಿಟ್ಟೋಗಲ್ಲ ಅಂತ ಆಣೆ ಪ್ರಮಾಣ ಮಾಡಿಸಿದ ಮುನಿರತ್ನ: ವಿಡಿಯೋ ವೈರಲ್‌

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ. ರಸ್ತೆ ಬದಿಯಲ್ಲಿ ಕಸ ಸುರಿಯಬೇಡಿ, ಸುರಿದರೆ 20 ಸಾವಿರ ದಂಡ ವಿಧಿಸಲಾಗುತ್ತದೆ ಎನ್ನುವ ನಿಯಮವನ್ನು ಪಂಚಾಯಿತಿ ಮಾಡಿದೆ. ಅಷ್ಟೇ ಅಲ್ಲ, ಇಲ್ಲಿ ಯಾರೂ ಕಸ ಸುರಿಯಬಾರದು ಎಂದು ಸಿಸಿ ಕ್ಯಾಮೆರಾಗಳನ್ನು ಪಂಚಾಯಿತಿ ಅಧಿಕಾರಿಗಳು ಅಳವಡಿಸಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಪಂಚಾಯಿತಿಯೇ ರಸ್ತೆ ಬದಿಯಲ್ಲಿ ಲೋಡ್ ಗಟ್ಟಲೆ ಕಸ ಸುರಿಯುತ್ತಿದ್ದಾರಂತೆ. 
 

Video Top Stories