BIG 3: ಅರ್ಕಾವತಿ ಲೇಔಟ್‌ನಲ್ಲಿ ಮನೆಕಟ್ಟಿದವರ ನರಕಯಾತನೆ..!

ಎಂಸಿಹೆಚ್‌ಎಸ್‌ ಬಡಾವಣೆಯ ಪಕ್ಕದಲ್ಲೇ ಇರುವ ಅರ್ಕಾವತಿ ಬಡಾವಣೆಯಲ್ಲಿ ಮಾತ್ರ ಯಾವುದೇ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ಇಲ್ಲಿನ ಬಿಡಿಎ ವಿರುದ್ಧ ಹರಿಹಾಯ್ದಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು(ಜು.14):  ಯಲಹಂಕ ಬಳಿಯ ಬಿಡಿಎ ನಿರ್ಮಿಸಿರುವ ಅರ್ಕಾವತಿ ಲೇಔಟ್‌ನ ಎಂಸಿಹೆಚ್‌ಎಸ್‌ ಬಡಾವಣೆಯಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನ ಒದಗಿಸಲಾಗಿದೆ. 24 ಎಕರೆ ಜಾಗದಲ್ಲಿ ಸುಮಾರು 7೦ ಭವ್ಯ ಬಂಗಲೆಗಳನ್ನ ಕಟ್ಟಲಾಗಿದೆ. ಇವೆಲ್ಲ ಬಂಗಲೆಗಳು ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ಮನೆಗಳಾಗಿವೆ. ಆದರೆ, ಎಂಸಿಹೆಚ್‌ಎಸ್‌ ಬಡಾವಣೆಯ ಪಕ್ಕದಲ್ಲೇ ಇರುವ ಅರ್ಕಾವತಿ ಬಡಾವಣೆಯಲ್ಲಿ ಮಾತ್ರ ಯಾವುದೇ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ಇಲ್ಲಿನ ಬಿಡಿಎ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರಿಗಳು ಇರುವ ಬಡಾವಣೆಯಲ್ಲಿ ಮೂಲಸೌಕರ್ಯಗಳನ್ನ ಒದಗಿಸಲಾಗಿದೆ. ಆದರೆ, ಅರ್ಕಾವತಿ ಬಡಾವಣೆಯಲ್ಲಿ ಮಾತ್ರ ಯಾವುದೇ ಸೌಕರ್ಯಗಳಿಲ್ಲ. ಯಾಕೆ ಹೀಗೆ ಅವರಿಗೊಂದು ನ್ಯಾಯ, ನಮಗೊಂದು ನ್ಯಾಯಾನಾ? ಅಂತ ಇಲ್ಲಿನ ಜನತೆ ಪ್ರಶ್ನಿಸುತ್ತಿದ್ದಾರೆ. 

ರಾಜ್ಯದೆಲ್ಲೆಡೆ ಮಳೆ: ಸ್ಮಾರ್ಟ್‌ ಸಿಟಿ ತುಮಕೂರಲ್ಲಿ ಕುಡಿಯುವ ನೀರಿಗೆ ಬರ..!

Related Video