BIG 3: 3 ತಿಂಗಳಿಂದ ನೀರಿಲ್ಲದೆ ಜನರ ಪರದಾಟ! ಕೋಟಿ ಕೋಟಿ ಖರ್ಚು ಮಾಡಿದ್ರೂ ಸಿಗುತ್ತಿಲ್ಲ ನೀರು..!
ರಾಯಚೂರು ಜಿಲ್ಲೆ, ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ನಿತ್ಯವೂ 6-7 ಕೆಜಿ ಚಿನ್ನ ಉತ್ಪಾದನೆ ಆಗುತ್ತೆ. ಇಲ್ಲಿ ಉತ್ಪಾದನೆ ಆಗುವ ಬಂಗಾರಕ್ಕೆ ಭಾರೀ ಬೇಡಿಕೆಯೂ ಇದೆ. ಆದ್ರೆ ಹಟ್ಟಿ ಪಟ್ಟಣ ಪಂಚಾಯತ್ನ ದುರಾಡಳಿತದಿಂದಾಗಿ ಇಡೀ ಪಟ್ಟಣದ ಜನರು ನಿತ್ಯವೂ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು ಜಿಲ್ಲೆ, ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ನಿತ್ಯವೂ 6-7 ಕೆಜಿ ಚಿನ್ನ ಉತ್ಪಾದನೆ ಆಗುತ್ತೆ. ಇಲ್ಲಿ ಉತ್ಪಾದನೆ ಆಗುವ ಬಂಗಾರಕ್ಕೆ ಭಾರೀ ಬೇಡಿಕೆಯೂ ಇದೆ. ಚಿನ್ನ ಉತ್ಪಾದನೆ ಮಾಡುವ ಜನರ ಬದುಕು ಕೂಡ ಬಂಗಾರದಂತೆ ಇರಬೇಕು. ಆದ್ರೆ ಹಟ್ಟಿ ಪಟ್ಟಣ ಪಂಚಾಯತ್ನ ದುರಾಡಳಿತದಿಂದಾಗಿ ಇಡೀ ಪಟ್ಟಣದ ಜನರು ನಿತ್ಯವೂ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2-3 ತಿಂಗಳಿಂದ ಕುಡಿಯವ ನೀರಿಲ್ಲದೇ ರೋಸಿ ಹೋಗಿದ್ದೇವೆ. ನಮಗೆ ಕುಡಿಯಲು ನೀರು ಕೊಡಿ ಇಲ್ಲದಿದ್ದರೆ, ತೊಟ್ಟು ವಿಷ ನೀಡಿ ಅಂತ ಪಟ್ಟಣ ಪಂಚಾಯತ್ ಮುಂದೆ ಸ್ಥಳಿಯರೆಲ್ಲ ಧರಣಿ ನಡೆಸಿದ್ದಾರೆ. ಇನ್ನು ಈ ಹಟ್ಟಿ ಪಟ್ಟಣ ಪಂಚಾಯತ್ಗೆ ಕುಡಿಯುವ ನೀರಿನ ಸಲುವಾಗಿ ಹಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಿದ್ದಾರೆ. ಆ ಯೋಜನೆಯಂತೆ 3 ಗ್ರಾಮ ಪಂಚಾಯತ್ ಮತ್ತು ಒಂದು ಪಟ್ಟಣ ಪಂಚಾಯತ್ಗೆ ಟಣಮನಕಲ್ ಬಳಿಯ ಕೃಷ್ಣಾ ನದಿಯಿಂದ ನೀರು ಸರಭರಾಜು ಮಾಡಲಾಗುತ್ತೆ. RURAL DRINKING WATER AND SANITATION DEPARTMENT ಮತ್ತು ಪಟ್ಟಣ ಪಂಚಾಯತ್ ನೀರಿನ ನಿರ್ವಹಣೆ ಮಾಡಬೇಕು. ಆದ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಟ್ಟಿ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.