ಪಾವಗಡ ಅಪಘಾತ ಕೇಸ್‌: ಮೃತರ ಸಂಖ್ಯೆ 7 ಕ್ಕೇರಿಕೆ, ಮಗನ ಕಳ್ಕೊಂಡು ಪೋಷಕರ ಕಣ್ಣೀರು

*  ಚಿಕಿತ್ಸೆ ಫಲಕಾರಿಯಾಗದೇ ಮಹೇಂದ್ರ ಸಾವು
*  ಚಿತ್ರದುರ್ಗ ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ನಡೆದಿದ್ದ ಅಪಘಾತ 
*  ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರು
 

First Published Mar 26, 2022, 12:33 PM IST | Last Updated Mar 26, 2022, 12:33 PM IST

ಬೆಂಗಳೂರು(ಮಾ.26): ಚಿತ್ರದುರ್ಗ ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಸ್‌ ಅಪಘಾತದಿಂದ ಮೃತಪಟ್ಟ ಸಂಖ್ಯೆ 7 ಕ್ಕೇರಿದೆ. ಹೌದು, ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮಹೇಂದ್ರ ಎಂಬ ಯುವಕ ಮೃತಪಟ್ಟಿದ್ದಾನೆ. ಮಾ.19 ರಂದು ಚಿತ್ರದುರ್ಗ ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್‌ ಅಪಘಾತ ಸಂಭವಿಸತ್ತು. ದುರ್ಘಟನೆಯಲ್ಲಿ ಗಾಯಗೊಂಡು ಕಳೆದೊಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹೇಂದ್ರ ಇಂದು(ಶನಿವಾರ) ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮನೆಯ ಮಗನನ್ನ ಕಳೆದುಕೊಂಡ ಮಹೇಂದ್ರ ಪೋಷಕರು ಕಣ್ಣೀರಿಡುತ್ತಿದ್ದಾರೆ. 

James: ಅಪ್ಪು ಚಿತ್ರ ಗೆದ್ದಿದ್ದಕ್ಕೆ ಶಿವಣ್ಣ ಏನ್ ಹೇಳಿದ್ರು ಗೊತ್ತಾ.?

Video Top Stories