James: ಅಪ್ಪು ಚಿತ್ರ ಗೆದ್ದಿದ್ದಕ್ಕೆ ಶಿವಣ್ಣ ಏನ್ ಹೇಳಿದ್ರು ಗೊತ್ತಾ.?
ದೊಡ್ಮನೆ ಕೀರ್ತಿ ಕಳಶ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಕೊನೆಯ ಸಿನಿಮಾ ಜೇಮ್ಸ್ (James) ರೆಕಾರ್ಡ್ ಬುಕ್ನಲ್ಲಿ ಯಾರೂ ಅಳಿಸಲಾದ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದ 88 ವರ್ಷದ ಇತಿಹಾಸಲ್ಲೇ ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಜೇಮ್ಸ್ ಅನ್ನೋ ಹೆಗ್ಗಳಿಕೆ ಪಡೆದಿದೆ.
ದೊಡ್ಮನೆ ಕೀರ್ತಿ ಕಳಶ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಕೊನೆಯ ಸಿನಿಮಾ ಜೇಮ್ಸ್ (James) ರೆಕಾರ್ಡ್ ಬುಕ್ನಲ್ಲಿ ಯಾರೂ ಅಳಿಸಲಾದ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದ 88 ವರ್ಷದ ಇತಿಹಾಸಲ್ಲೇ ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಜೇಮ್ಸ್ ಅನ್ನೋ ಹೆಗ್ಗಳಿಕೆ ಪಡೆದಿದೆ. ತನ್ನ ತಮ್ಮನ ಸಿನಿಮಾ ಈ ದಾಖಲೆ ಮಾಡಿದ ಖುಷಿಯಲ್ಲಿ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಇದ್ದಾರೆ. ಹೀಗಾಗಿ ಜೇಮ್ಸ್ ಗೆಲುಗುವಿಗೆ ಕಾರಣ ದೊಡ್ಮನೆ ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಪ್ಪು ನೆನಪಲ್ಲೇ ಪ್ರೀತಿ ಪೂರ್ವಕ ಮಾತುಗಳನ್ನಾಡಿದ್ದಾರೆ.
ಬಹದ್ದೂರ್ ಚೇತನ್ ನಿರ್ದೇಶನದ ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಸಿನಿಮಾ, ಎರಡನೇ ವಾರವೂ ತನ್ನ ಭರ್ಜರಿ ಪ್ರದರ್ಶನವನ್ನ ಕಂಟಿನ್ಯೂ ಮಾಡಿದೆ. ರಾಜ್ಯ, ದೇಶ, ವಿದೇಶ ಸೇರಿ 100 ಕೋಟಿಗೂ ಹೆಚ್ಚು ಗಳಿಕೆ ಕಂಡಿರೋ ಜೇಮ್ಸ್ ನೋಡೋದಕ್ಕೆ ಇಷ್ಟು ದಿನ ದೊಡ್ಮನೆಯ ಅಭಿಮಾನಿಗಳು ಬರ್ತಿದ್ರು. ಈ ವಾರದಿಂದ ಅಪ್ಪು ಕೊನೆಯ ಸಿನಿಮಾ ನೋಡೋದಕ್ಕೆ ಪ್ರೇಕ್ಷಕರು ಕುಟುಂಬ ಸಮೇತರಾಗಿ ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಜೇಮ್ಸ್ ಬಾಕ್ಸಾಫೀಸ್ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುತ್ತಿದ್ದು, ಜೇಮ್ಸ್ 100 ಡೇಸ್ ಮುಗಿಸೋ ಹೊತ್ತಲ್ಲಿ 200 ಕೋಟಿ ಕ್ಲಬ್ ಸೇರಿದ್ರು ಆಶ್ಚರ್ಯು ಇಲ್ಲ.