ಬೆಂಗಳೂರಲ್ಲಿ ಕೊರೋನಾ ಸ್ಫೋಟ: ಪೊಲೀಸರೊಂದಿಗೆ ಬೊಮ್ಮಾಯಿ ತುರ್ತು ಸಭೆ

ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ ಹಿನ್ನೆಲೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತುರ್ತು ಸಭೆ ಕರೆದಿದ್ದಾರೆ. ಪಾದರಾಯನಪುರ, ಹೊಂಗಸಂದ್ರ ಘಟನೆ ಬಗ್ಗೆ ಚರ್ಚೆ ನಡೆಯಲಿದೆ.

First Published Apr 24, 2020, 4:01 PM IST | Last Updated Apr 24, 2020, 4:01 PM IST

ಬೆಂಗಳೂರು(ಏ.24): ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ ಹಿನ್ನೆಲೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತುರ್ತು ಸಭೆ ಕರೆದಿದ್ದಾರೆ. ಪಾದರಾಯನಪುರ, ಹೊಂಗಸಂದ್ರ ಘಟನೆ ಬಗ್ಗೆ ಚರ್ಚೆ ನಡೆಯಲಿದೆ.

ಹೊಂಗಸಂದ್ರದಲ್ಲಿ ಮೆಟ್ರೋ ಕೆಲಸ ಮಾಡುತ್ತಿದ್ದ ಬಿಹಾರಿ ವ್ಯಕ್ತಿಯೊಬ್ಬನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆತನ ಜೊತೆಗಿದ್ದ 9 ಮಂದಿಗೂ ಕೊರೋನಾ ಬಂದಿದೆ. ಒಟ್ಟು 16 ಜನರಿಗೆ ಕೊರೋನಾ ಬಂದಿದ್ದು, ಇವರಿಂದ ಇನ್ಯಾರಿಗೆಲ್ಲಾ ಹರಡಿದೆ ಎಂಬುದನ್ನು ಕಂಡುಹಿಡಿಯುವುದು ಸವಾಲಿನ ಸಂಗತಿಯಾಗಿದೆ.

ಬೆಂಗಳೂರಿಗೆ ಆತಂಕ: ಕೈದಿಗಳನ್ನು ಶಿಫ್ಟ್ ಮಾಡಿದ್ದೇ ಕಂಟಕವಾಯ್ತಾ..?

ಪಾದರಾಯನಪುರದಲ್ಲಿ ಪುಂಡಾಟಿಕೆ ನಡೆಸಿದವರಲ್ಲೂ ಕೆಲವರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಎರಡೂ ಬೆಂಗಳೂರಿಗೆ ತಲೆ ನೋವಾಗಿ ಪರಿಣಮಿಸಿದೆ.