Asianet Suvarna News Asianet Suvarna News

Omicron Threat : ಬೆಂಗಳೂರಿನಲ್ಲಿ ಸ್ಟ್ರಿಕ್ಟ್ ರೂಲ್ಸ್ - ನಾಗರಿಕರೇ ಎಚ್ಚರ!

Dec 5, 2021, 1:53 PM IST
  • facebook-logo
  • twitter-logo
  • whatsapp-logo

  ಬೆಂಗಳೂರು (ಡಿ.05): ರಾಜ್ಯದಲ್ಲಿ ಕೊರೋನಾತಂಕದ (Corona) ಜೊತೆಗೆ ಇದೀಗ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ದೇಶದ ಮೊದಲ  ಓಮಿಕ್ರಾನ್(Omicron) ಪ್ರಕರಣಗಳು ಪತ್ತೆಯಾಗಿದ್ದು,  ಇದೀಗ ಕೊರೋನಾ ಮೂರನೆ ಅಲೆಯ ಆತಂಕ ಉಂಟು ಮಾಡಿದೆ.  ಈ ನಿಟ್ಟಿನಲ್ಲಿ  ಬೆಂಗಳೂರಿನಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿದೆ.  ಬಿಬಿಎಂಪಿ (BBMP) ತಾಂತ್ರಿಕ ಸಲಹಾ ಸಮಿತಿಯಲ್ಲಿ  ಚರ್ಚೆ ನಡೆಸಲಾಗುತ್ತಿದೆ.  ಆರಂಭದಲ್ಲಿಯೇ  ಕರ್ಫ್ಯೂಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದ್ದು, ಬಿಬಿಎಂಪಿ ತಾಂತ್ರಿಕ ಸಲಹಾ  ಸಮಿತಿ ಸದಸ್ಯರಿಂದ ಸಲಹೆ  ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. 

Covid-19 Variant: ಓಮಿಕ್ರೋನ್‌ ವಿದೇಶದಿಂದ ಬಂದಿಲ್ಲ, ಭಾರತದಲ್ಲೇ ಇದೆ : ಡಾ. ರಾಕೇಶ್‌ ಮಿಶ್ರಾ!

ಬೆಂಗಳೂರಿನ ಮಾಲ್, ಥಿಯೇಟರ್ ಮಾರ್ಕೆಟ್‌ಗೆ ವಿಶೇಷ ಗೈಡ್‌ ಲೈನ್ ನೀಡುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಹೊಸ ರೂಲ್ಸ್ ಜಾರಿ ಆಗುವ ಸಾಧ್ಯತೆ ಇದೆ. ವ್ಯಾಕ್ಸಿನೇಷನ್ ಹಾಗೂ ಪರೀಕ್ಷೆ ಹೆಚ್ಚಳದ ಬಗ್ಗೆಯೂ ಗಮನ ಹರಿಸಲಾಗುತ್ತದೆ.