High Alert in KIA Airport : ಒಮಿಕ್ರಾನ್ ಆತಂಕ : ಹೈ ರಿಸ್ಕ್ ದೇಶದ ಪ್ರಯಾಣಿಕರ ಮೇಲೆ ನಿಗಾ
ದೇಶದಲ್ಲಿ ಕೋವಿಡ್ ಜೊತೆಗೆ ಇದೀಗ ಒಮಿಕ್ರಾನ್ ಕಂಟಕವೂ ಜೋರಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲೆಡೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಒಮಿಕ್ರಾನ್ ನಿಯಂತ್ರಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಕೊರೋನಾ ಟೆಸ್ಟ್ ಕೂಡ ಮಾಡಲಾಗುತ್ತದೆ.
ಬೆಂಗಳೂರು(ಡಿ.11): ದೇಶದಲ್ಲಿ ಕೋವಿಡ್ (Covid ) ಜೊತೆಗೆ ಇದೀಗ ಒಮಿಕ್ರಾನ್ ಕಂಟಕವೂ ಜೋರಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲೆಡೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಒಮಿಕ್ರಾನ್ (Omicron) ನಿಯಂತ್ರಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟಲ್ಲಿ (Bengaluru International Airport) ಸಕಲ ಸಿದ್ಧತೆಗಳು ನಡೆದಿದೆ. ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಕೊರೋನಾ ಟೆಸ್ಟ್ ಕೂಡ ಮಾಡಲಾಗುತ್ತದೆ.
Omicron Threat: ವಿದೇಶದಿಂದ ಬಂದ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಮೇಲೆ ಒಲವು
ಇಲ್ಲಿನ ಸಿಬ್ಬಂದಿ ಅನೇಕ ಮುಂಜಾಗೃತೆ ವಹಿಸಿದ್ದು, ಹೈ ರಿಸ್ಕ್ ದೇಶಗಳ ಪ್ರಯಾಣಿಕರಿಗೆ ಮತ್ತೊಂದು ದಾರಿ ಮಾಡಲಾಗಿದೆ. ಎಲ್ಲರ ರಿಜಿಸ್ಟ್ರೇಶನ್, ಕಡ್ಡಾಯ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಅಲ್ಲದೇ ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ಪಡೆದು ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ.