*   ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು*   ಸಂಪೂರ್ಣ ಗುಣಮುಖರಾದ ಒಮಿಕ್ರೋನ್‌ ಸೋಂಕು ದೃಢಪಟ್ಟ ವೈದ್ಯ*   ಒಮಿಕ್ರೋನ್‌ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ  

ಬೆಂಗಳೂರು(ಡಿ.11):  ಹೈರಿಸ್ಕ್‌ ದೇಶಗಳಿಂದ ಆಗಮಿಸಿ ಕೊರೊನಾ(Coronavirus) ಸೋಂಕು ದೃಢಪಟ್ಟು ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಪೈಕಿ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ(Private Hospital) ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಜರ್ಮನಿಯಿಂದ(Germany) ಬಂದಿದ್ದ ಇಬ್ಬರು ಮತ್ತು ಇಂಗ್ಲೆಂಡ್‌ನಿಂದ(England) ಬಂದಿದ್ದ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಮೂವರಿಗೆ ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಆರೋಗ್ಯ ಇಲಾಖೆಯು(Department of Health) ಖಾಸಗಿ ಆಸ್ಪತ್ರೆಗಳಲ್ಲಿಯೂ ಒಮಿಕ್ರೋನ್‌(Omicron) ಸೋಂಕಿತರು ಮತ್ತು ಹೈರಿಸ್ಕ್‌ ದೇಶದಿಂದ ಆಗಮಿಸಿರುವವರ ಖಾಸಗಿ ಆಸ್ಪತ್ರೆಯಲ್ಲಿ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ(Treatment) ಪಡೆಯಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಖಾಸಗಿ ಆಸ್ಪತ್ರೆಗೆ ತೆರಳುವುದಾಗಿ ಆಸ್ಪತ್ರೆ ವೈದ್ಯರಿಗೆ(Doctors) ತಿಳಿಸಿದ್ದಾರೆ.

Covid-19 Variant: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಂದು 30 ಲಕ್ಷಕ್ಕೆ?

ಶುಕ್ರವಾರ ತಡರಾತ್ರಿ ಅಥವಾ ಶನಿವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ. ಸದ್ಯ ಇಬ್ಬರಿಗೂ ಸೋಂಕಿನ ಲಕ್ಷಣಗಳಿಲ್ಲ. ಆದರೆ, ಒಮಿಕ್ರೋನ್‌ ಪತ್ತೆ ಪರೀಕ್ಷೆ (Genetic Test) ವರದಿ ಬರುವವರೆಗೂ ಖಾಸಗಿ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ’ ಎಂದು ಬೌರಿಂಗ್‌ ಆಸ್ಪತ್ರೆ ಹಿರಿಯ ವೈದ್ಯರೊಬ್ಬರು ತಿಳಿಸಿದರು.

ನಾಳೆ ಒಮಿಕ್ರೋನ್‌ ಸೋಂಕಿತರು ಬಿಡುಗಡೆ?:

ಒಮಿಕ್ರೋನ್‌ ಸೋಂಕು ದೃಢಪಟ್ಟ 46 ವರ್ಷದ ವೈದ್ಯ ಸಂಪೂರ್ಣ ಗುಣಮುಖರಾಗಿದ್ದಾರೆ. ಮಾರ್ಗಸೂಚಿಯಂತೆ(Guidelines) ಎರಡು ಬಾರಿ ಸೋಂಕು ಪರೀಕ್ಷೆ ನಡೆಸಬೇಕಿದ್ದು, ಶುಕ್ರವಾರ ಒಂದು ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್‌ ಬಂದಿದೆ. ಶನಿವಾರ ಬೆಳಗ್ಗೆ ಮತ್ತೊಂದು ಪರೀಕ್ಷೆ ನಡೆಸಲಿದ್ದು, ಅದು ಕೂಡಾ ನೆಗೆಟಿವ್‌ ಬಂದರೆ ಸಂಜೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಇನ್ನು ಸೋಂಕಿತರ ವೈದ್ಯರ ಜತೆ ಸಂಪರ್ಕ ಹೊಂದಿದ್ದ ಐದು ಮಂದಿಯಲ್ಲಿ ಮೂವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಸದ್ಯ ಪತ್ನಿ ಮತ್ತು ಮಗಳಿಗೂ ಎರಡೂ ಬಾರಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, ಅವರೂ ಕೂಡಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. 

10 ದಿನವಾದರೂ ಬರಲಿಲ್ಲ ವಂಶವಾಹಿ ವರದಿ!

ಒಮಿಕ್ರೋನ್‌ ದೃಢಪಟ್ಟಿದ್ದ ವೈದ್ಯರ ಸಂಪರ್ಕ ಹೊಂದಿದ್ದ ಐದು ಮಂದಿಗೂ ಒಮಿಕ್ರೋನ್‌ ರೂಪಾಂತರಿಯೇ ತಗುಲಿದೆಯೇ ಎಂಬ ಪತ್ತೆಗೆ ವಂಶವಾಹಿ ಪರೀಕ್ಷೆ ನಡೆಸಲಾಗುತ್ತಿದೆ. ಡಿ.1ರಂದೇ ಈ ಐದು ಮಂದಿಯ ಗಂಟಲು ದ್ರವ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 10 ದಿನ ಕಳೆದರೂ ವರದಿ ಬಂದಿಲ್ಲ. ಈಗಾಗಲೇ ಮೂರು ಮಂದಿ ಬಿಡುಗಡೆಯಾಗಿದ್ದು, ಇನ್ನಿಬ್ಬರು ಬಿಡುಗಡೆಗೆ ಸಿದ್ಧರಾಗಿದ್ದಾರೆ. ವಂಶವಾಹಿ ಪರೀಕ್ಷೆ ವರದಿ ಬರಲು 6-7 ದಿನ ಅಗತ್ಯವಿತ್ತು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

Corona Update:ರಾಜ್ಯದಲ್ಲಿ ಕೊರೋನಾ ಎಷ್ಟಿದೆ? ಇಲ್ಲಿದೆ ಡಿ.10ರ ಅಂಕಿ-ಸಂಖ್ಯೆ

ಒಮಿಕ್ರೋನ್‌ ಸೋಂಕು ತಗುಲಿದವರಿಗೆ ಕರ್ನಾಟಕದಲ್ಲಿ ಹೊಸ ರೂಲ್ಸ್!

ಕೊರೋನಾದ(Coronavirus) ರೂಪಾಂತರಿ ತಳಿ ಒಮಿಕ್ರೋನ್‌ ಸೋಂಕು ದೃಢಪಟ್ಟವರಿಗೆ ಕಡ್ಡಾಯವಾಗಿ 10 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ, ಬಿಡುಗಡೆಗೂ ಮುನ್ನ ಎರಡು ಬಾರಿ ನೆಗೆಟಿವ್‌ ವರದಿ ಹಾಗೂ ಒಂದು ವಾರ ಹೋಂ ಕ್ವಾರಂಟೈನ್‌ಗೆ ಸೂಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ತಜ್ಞರ ಸಮಿತಿ ಚರ್ಚಿಸಿ ನೀಡಿದ ಸಲಹೆ ಆಧರಿಸಿ ಇಲಾಖೆಯು ಒಮಿಕ್ರೋನ್‌ ಸೋಂಕು ಪರೀಕ್ಷೆ, ಚಿಕಿತ್ಸೆಗಳ ಕುರಿತು ಮಾರ್ಗಸೂಚಿ ಪ್ರಕಟಿಸಿದೆ.

ಒಮಿಕ್ರೋನ್‌ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ದಾಖಲಿಸಿ 10 ದಿನ ಚಿಕಿತ್ಸೆ ನೀಡಬೇಕು. ಬಿಡುಗಡೆಗೂ ಸತತ ಮೂರು ದಿನ ಮುನ್ನ ಸೋಂಕಿನ ಲಕ್ಷಣಗಳಿರಬಾರದು. ಸತತ ನಾಲ್ಕು ದಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣ (ಸ್ಯಾಚುರೇಷನ್‌) ಶೇ.95ಕ್ಕಿಂತ ಹೆಚ್ಚಿರಬೇಕು. ಮುಖ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನ 24 ಗಂಟೆಗಳಲ್ಲಿ ಎರಡು ಬಾರಿ ಸೋಂಕು ಪರೀಕ್ಷೆ ವರದಿ ನೆಗೆಟಿವ್‌ ಬರಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟರೆ ಮತ್ತೆ 48 ಗಂಟೆಗಳ ಬಳಿಕ ಪರೀಕ್ಷೆ ನಡೆಸಬೇಕು. ಇವುಗಳ ಜತೆಗೆ ಬಿಡುಗಡೆ ಸಂದರ್ಭದಲ್ಲಿ ಡಿ-ಡಿಮ್ಮರ್‌, ಎಸ್‌.ಫೆರಿಟಿನ್‌, ಎಸ್‌.ಎಲ್‌ಡಿಎಚ್‌ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಸಮಾಧಾಕರವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.