Belagavi: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾಳು ಕೊಂಪೆಯಾದ ನೂರಾರು ಮನೆಗಳು

*  ಇರೋಕೆ ಮನೆಗಳೇ ಇಲ್ಲದೆ ಸಮುದಾಯ ಭವನಗಳಲ್ಲಿ ಒಂದು ಕಡೆ ವಾಸ
*  ಮತ್ತೊಂದು ಕಡೆ ಸರ್ಕಾರ ಕಟ್ಟಿಸಿದ ನೂರಾರು ಮನೆಗಳಿದ್ರೂ ಸಹ ಬರ್ತಿಲ್ಲ ಜನ
*  ಮನೆ ನಿರ್ಮಾಣವಾಗಿ 10 ವರ್ಷಗಳು ಕಳೆದರೂ ಮೂಲಭೂತ ಸೌಲಭ್ಯಗಳಿಲ್ಲ
 

First Published Nov 25, 2021, 11:56 AM IST | Last Updated Nov 25, 2021, 12:01 PM IST

ಚಿಕ್ಕೋಡಿ(ನ.25):  ಕೃಷ್ಣಾ ನದಿ ತೀರದಲ್ಲಿ ನೆರೆ ಬಂದು ಜನ ಮನೆ ಕಳೆದುಕೊಂಡು ದೇವಸ್ಥಾನ ಸಮುದಾಯ ಭವನಗಳಲ್ಲಿ ವಾಸವಿದ್ರೆ ಇತ್ತ ಸರ್ಕಾರ ನಿರಾಶ್ರಿತರಿಗೆ ಅಂತ ಕಟ್ಟಿದ ನೂರಾರು ಮನೆಗಳಲ್ಲಿ ಜನರೇ ಇಲ್ಲ. ಅತ್ತ ನದಿ ತೀರದಲ್ಲಿ ಮನೆ ಇಲ್ಲದೆ ಜನ ಪರಿತಪಿಸುತ್ತಿದ್ದರೆ ಇತ್ತ ಮನೆಗಳಿದ್ದರೂ ಸಹ ಜನ ಅಲ್ಲಿಗೆ ಇರೋಕೆ ಮನಸು ಮಾಡ್ತಿಲ್ಲ ಅರೆ ಅದ್ಯಾಕೆ ಜನ ಅಲ್ಲಿರೋಕೆ ಕಾಯೆ ಹಿಂದೇಟು ಹಾಕ್ತಿದಾರೆ ಅಂತೀರಾ ಈ ಸ್ಟೋರಿ ನೋಡಿ...

ಸತತ ಮೂರು ವರ್ಷಗಳ ರಣಭೀಕರ ಪ್ರವಾಹಕ್ಕೆ ಸಿಲುಕಿ ಕೃಷ್ಣಾ ನದಿ ತೀರದ ಅದೆಷ್ಟೋ ಕುಟುಂಬಗಳು ಇನ್ನೂ ಸಹ ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ವಾಸವಿದೆ. ಆದರೆ ಸರ್ಕಾರವೇ ನಿರಾಶ್ರಿತರಿಗೆ ಅಂತ ಕಟ್ಟಿದ ನೂರಾರು ಸೂರುಗಳು ಜನರೇ ಇಲ್ಲದೆ ಹಾಳು ಕೊಂಪೆಯಾಗಿವೆ. ಹೌದು, ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಸ್ವತಹ ಸರ್ಕಾರದಿಂದಲೇ ನಿರ್ಮಾಣವಾದ ಮನೆಗಳು. ಮನೆ ನಿರ್ಮಾಣವಾಗಿ 10 ವರ್ಷಗಳು ಕಳೆದರೂ ಸಹ ಜನ ಇಲ್ಲಿಗೆ ಬಂದು ಇರೋಕೆ ಮನಸ್ಸು ಮಾಡುತ್ತಿಲ್ಲ.! 

Council Election: ಅಖಾಡದಲ್ಲಿರೋ ಇವರು1000 ಕೋಟಿಗಳ ಒಡೆಯ

2010-11 ಸಾಲಿನಲ್ಲಿ ರಾಯಬಾಗದ ನಿರಾಶ್ರಿತರಿಗೆ ಅಂತಾನೆ ವಾಜಪೇಯಿ ವಸತಿ ಯೋಜನೆಯಡಿ ಸುಮಾರು 8 ಎಕರೆ ವಿಸ್ತಿರ್ಣದ ಭೂ ಪ್ರದೇಶದಲ್ಲಿ ಈ ಮನೆಗಳು ನಿರ್ಮಾಣವಾಗಿವೆ. ಸರ್ಕಾರ ಕೊಟ್ಯಂತರ ರೂಪಾಯಿ ಖರ್ಚು ಮಾಡಿ ಈ ಸೂರುಗಳನ್ನೇನೋ ನಿರ್ಮಾಣ ಮಾಡಿದೆ. ಆದರೆ ಅಲ್ಲಿ ಬದುಕಲು ಮೂಲಭೂತ ಸೌಕರ್ಯಗಳನ್ನ ಅಧಿಕಾರಿಗಳು ಜನರಿಗೆ ಮಾಡಿಕೊಡುವಲ್ಲಿ ಎಡವಿದ್ದಾರೆ ಎಂದು ಜನ ಆರೋಪ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಜನ ಇಲ್ಲಿರೋಕೆ ಮನಸು ಮಾಡ್ತಿಲ್ಲ ಎನ್ನುವುದು ಜನರ ವಾದ.

ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಸಹ ಪೂಜಾರಿ ವರ ನೀಡಲಿಲ್ಲ ಎಂಬಂತೆ ಮನೆಗಳು ನಿರ್ಮಾಣವಾಗಿ 10 ವರ್ಷಗಳೇ ಕಳೆದರೂ ಸಹ ಇಲ್ಲಿಯವರೆಗೂ ಅಧಿಕಾರಿಗಳಿಗೆ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಆಗಿಲ್ಲ. ಹೀಗಾಗಿ ಸರ್ಕಾರದ ಕೋಟಿ ಕೋಟಿ ಅನುದಾನ ನೀರಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಇನ್ನಾದರೂ ಈ ಪ್ರದೇಶಕ್ಕೆ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸಿಕೊಡ್ತಾರಾ ಎಂಬುದನ್ನ ಕಾದು ನೋಡಬೇಕಿದೆ.