Asianet Suvarna News Asianet Suvarna News

ಗೋ ಶಾಲೆ ನಿರ್ವಹಣೆಗಿಲ್ಲ ಸರ್ಕಾರದ ಅನುದಾನ! ಬರದ ನಡುವೆ ಗೋಪಾಲಕರ ಗೋಳು ಕೇಳೋರಿಲ್ಲ

ಗುಮ್ಮಟನಗರಿಯಲ್ಲಿ ಗೋಪಾಲಕರ‌ ಗೋಳಾಟ ಹೇಳತೀರದಂತಾಗಿದೆ. ಒಂದು ವರ್ಷದಿಂದ ಗೋ ಶಾಲೆಗಳಿಗೆ ಸರ್ಕಾರದಿಂದ ಬರಬೇಕಾದ ಅನುದಾನವೇ ಬಂದಿಲ್ಲ. ಇತ್ತ ಬರದ ನಡುವೆ ಮೇವಿನ ಕೊರತೆಯನ್ನೂ ಎದುರಿಸುತ್ತಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಗೋಶಾಲೆಗಳಲ್ಲಿ ಹಸುಗಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ಗೋಶಾಲೆಗಳಿಗೆ (cowshed) ಜಾನುವಾರುಗಳ ನಿರ್ವಹಣೆಗೆ ಅನುದಾನ ನೀಡುವ ಕೆಲಸವನ್ನ ಇಂದಿನ ಬಿಜೆಪಿ(BJP) ಸರ್ಕಾರ ಮಾಡಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಗೋಶಾಲೆ ನಿರ್ವಹಣೆಗೆ ಬ್ರೇಕ್ ಹಾಕಿದಂತೆ ಕಾಣುತ್ತಿದೆ. ಈವರೆಗೂ ಸರ್ಕಾರದಿಂದ ಸರಿಯಾಗಿ ಅನುದಾನ ಬಿಡುಗಡೆಯಾಗದೇ ಗೋಪಾಲಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲಿ ಪುಣ್ಯಕೋಟಿ ದತ್ತು ಯೋಜನೆಯಡಿ ಖಾಸಗಿ ಗೋಶಾಲೆಗಳಿಗೆ ಆರ್ಥಿಕ ನೆರವು ದೊರೆತು ಕೊಂಚ ಅನುಕೂಲವಾಗಿತ್ತು. ಆದರೆ ಈಗ ಈ ಯೋಜನೆ ಸ್ಥಗಿತವಾಗಿದೆ ಎಂದು ನಿಡಗುಂದಿ ತಾಲೂಕಿನ ಯಲಗೂರದ ಪ್ರಮೋದಾತ್ಮ ಗೋಶಾಲೆಯ ಕಾರ್ಯದರ್ಶಿ ಅಜಿತ್ ಕುಲಕರ್ಣಿ ಹೇಳುತ್ತಾರೆ. ವಿಜಯಪುರ(Vijayapura) ಜಿಲ್ಲೆಯಲ್ಲಿ ಮೂರು ಖಾಸಗಿ ಗೋಶಾಲೆ, ಒಂದು ಸರ್ಕಾರಿ ಗೋಶಾಲೆ ಇದೆ. ಜಿಲ್ಲೆಯ ಭೂತನಾಳದ ಬಳಿಯ ದಿ ಕ್ಯಾಟಲ್ ಬ್ರಿಡಿಂಗ್ ಮತ್ತು ಡೈರಿ ಫಾರ್ಮಿಂಗ್ ಅಸೋಸಿಯೇಶನ್ ಗೋಶಾಲೆಯಲ್ಲಿ 825, ಕಗ್ಗೋಡದ ಸಿದ್ದೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಗೋರಕ್ಷಕ ಕೇಂದ್ರದಲ್ಲಿ 507 ಮತ್ತು ಯಲಗೂರದ ಪ್ರಮೋದಾತ್ಮ ಗೋ ಸಂರಕ್ಷಣಾ ಕೇಂದ್ರದಲ್ಲಿ 706 ಗೋವುಗಳ ಪಾಲನೆ ಮತ್ತು ಸಂರಕ್ಷಣೆ ಮಾಡಲಾಗುತ್ತಿದೆ. ಸದ್ಯ ಗೋಶಾಲೆಗಳಲ್ಲಿನ ಹಸುಗಳ ನಿರ್ವಹಣೆಗಾಗಿ ಸರ್ಕಾರದಿಂದ ಬರಬೇಕಾದ ಅನುದಾನ ಕಳೆದ ಒಂದು ವರ್ಷಗಳಿಂದ ಬಂದಿಲ್ಲ. 

ಇದನ್ನೂ ವೀಕ್ಷಿಸಿ:  ಹೆತ್ತವರಿಂದಲೇ ಯುವಕನಿಗೆ ಗೃಹ ಬಂಧನ ಶಿಕ್ಷೆ! ಮಾನಸಿಕ ಅಸ್ವಸ್ಥ ಪಟ್ಟಕಟ್ಟಿ 6 ವರ್ಷ ಕೈಗೆ ಕೋಳ ..!