ದೇವಸ್ಥಾನ ಓಪನ್ ಆದ್ರೂ‌ ಬಾರದ ಜನರು; ಬಳ್ಳಾರಿಯ ಬಹುತೇಕ ದೇವಾಲಯಗಳು ಖಾಲಿ ಖಾಲಿ!

ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಜೂನ್ 8 ರಿಂದ ದೇವಸ್ಥಾನಗಳು ಪುನಾರಂಭಗೊಂಡಿದೆ. ಆದರೆ ಭಕ್ತರು ನಿರೀಕ್ಷಿತ ಮಟ್ಟದಲ್ಲಿ ಆಗಮಿಸುತ್ತಿಲ್ಲ. ಕಳೆದೆರಡು ದಿನಕ್ಕೆ ಹೊಲಿಸಿದರೆ ಇವತ್ತು ದೇವಸ್ಥಾನಕ್ಕೆ ಬರೋ ಜನರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. 

First Published Jun 10, 2020, 5:19 PM IST | Last Updated Jun 10, 2020, 5:23 PM IST

ಬೆಂಗಳೂರು (ಜೂ. 10): ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಜೂನ್ 8 ರಿಂದ ದೇವಸ್ಥಾನಗಳು ಪುನಾರಂಭಗೊಂಡಿದೆ. ಆದರೆ ಭಕ್ತರು ನಿರೀಕ್ಷಿತ ಮಟ್ಟದಲ್ಲಿ ಆಗಮಿಸುತ್ತಿಲ್ಲ. ಕಳೆದೆರಡು ದಿನಕ್ಕೆ ಹೊಲಿಸಿದರೆ ಇವತ್ತು ದೇವಸ್ಥಾನಕ್ಕೆ ಬರೋ ಜನರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. 

ಧಾರ್ಮಿಕ ಕೇಂದ್ರಗಳ ರೀ ಓಪನ್ ಡೇಂಜರ್.. ಡೇಂಜರ್..! ಟಾಸ್ಕ್‌ ಫೋರ್ಸ್ ತಜ್ಞರ ಕಳವಳ

ಸೋಮವಾರ ಹಂಪಿ ವಿರೂಪಾಕ್ಷೇಶ್ವರ, ಕೊಟ್ಟೂರಿನ ಕೊಟ್ಟೂರೇಶ್ವರ ದೇವಸ್ಥಾನ ಮತ್ತು ಮಂಗಳವಾರ ದುರ್ಗಮ್ಮ ದೇವಸ್ಥಾನದಲ್ಲಿ ಅತಿಹೆಚ್ಚು ಭಕ್ತರು ಆಗಮಿಸಿದ್ದರು. ಆದರೆ ಇಂದು ಭಕ್ತರ ಸಂಖ್ಯೆ ವಿರಳವಾಗಿದೆ.