News Hour: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ.. ಹಿಜಾಬ್ ಬೇಕು ಎಂದವರು ಬರೆಯದೇ ಮನೆಗೆ ಹೋದರು
* ಎಸ್‌ಎಸ್‌ಎಲ್ ಸಿ ಪರೀಕ್ಷೆ ಆರಂಭ ಮತ್ತು ಹಿಜಾಬ್ ಆದೇಶ
* ಹಿಜಾಬ್ ಎಂದು ಪರೀಕ್ಷೆ ಬಿಟ್ಟವರೇ ಕೆಲವೇ ಮಂದಿ
* ಹಲಾಲ್ ಮಾಂಸ ಬೇಡ.. ಹಿಂದು ಜನಜಾಗೃತಿ ಸಮಿತಿ ಅಭಿಯಾನ
*ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪು ಮತ್ತೆ ಉಲ್ಲೇಖ
ಬೆಂಗಳೂರು(ಮಾ. 28) ಕರ್ನಾಟಕದಲ್ಲಿ (Karnataka) ಎಸ್ ಎಸ್‌ಎಲ್ ಸಿ (SSLC) ಪರೀಕ್ಷೆ ಆರಂಭವಾಗಿದೆ. ಕರ್ನಾಟಕ ಹೈಕೋರ್ಟ್(High Court) ಸಮವಸ್ತ್ರಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ಆದೇಶವನ್ನು ಸರ್ಕಾರ ಪಾಲಿಸುತ್ತೇನೆ ಎಂದು ತಿಳಿಸಿತ್ತು. ಧರ್ಮದ ಆಚರಣೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳೋಣ.. ಶಾಲೆಯಲ್ಲಿ ಬೇಡ.. ಶಿಕ್ಷಣ ಬಹಳ ಮುಖ್ಯ ಇದನ್ನು ಮಕ್ಕಳು ಮತ್ತು ಪೋಷಕರೇ ಹೇಳಿದ್ದಾರೆ.
ಪರೀಕ್ಷೆ ವೇಳೆ ಮೃತಪಟ್ಟ ವಿದ್ಯಾರ್ಥಿನಿ
ಯುಗಾದಿ ಸಂದರ್ಭದಲ್ಲಿ ಹಲಾಲ್ ಮಾಂಸ ಬೇಡ ಎಂಬ ಅಭಿಯಾನ ಆರಂಭವಾಗಿದೆ. ಹಿಂದು ಜನಜಾಗೃತಿ ಸಮಿತಿ ಇಂಥದ್ದೊಂದು ಮಾತನ್ನು ಮುಂದೆ ಇಟ್ಟಿದೆ . ವಸ್ತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದ ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಎಲ್ಲ ಎಂಬುದನ್ನು ಹೇಳಿದೆ. ಎಸ್‌ಎಸ್ ಎಲ್ ಸಿ ಪರೀಕ್ಷೆ ಸಂದರ್ಭ ಮತ್ತೆ ವಿಚಾರ ಚರ್ಚೆಗೆ ಬಂದಿದೆ.