'ಕೊನೆ ಕ್ಷಣದಲ್ಲಿ ಆಕ್ಸಿಜನ್ ಕೇಳಿದರೆ ನಾವೇನು ಮಾಡೋಕಾಗುತ್ತೆ?'

ಖಾಸಗಿ ಆಸ್ಪತ್ರೆಗಳ ನಡವಳಿಕೆ ಬದಲಾಗಬೇಕು/ ಆಕ್ಸಿಜನ್ ಇಲ್ಲ ಎಂದು ಕೊನೆ ಕ್ಷಣದಲ್ಲಿ ಹೇಳುತ್ತಾರೆ/ ಅರ್ಧ ಗಂಟೆಯಲ್ಲಿ ಆಕ್ಸಿಜನ್ ಕೊಡಿ ಎಂದರೆ ಏನು ಮಾಡಲಿಕ್ಕೆ ಸಾಧ್ಯ? ಮೈಸೂರು ಸಂಸದ ಪ್ರಶ್ನೆ

First Published May 10, 2021, 6:47 PM IST | Last Updated May 10, 2021, 7:15 PM IST

ಮೈಸೂರು(ಮೇ  10)   ಖಾಸಗಿ ಆಸ್ಪತ್ರೆಯವರು ಕೊನೆ ಕ್ಷಣದಲ್ಲಿ ಆಕ್ಸಿಜನ್ ಕೇಳುತ್ತಾರೆ. ಒಂದು ವೇಳೆ ಕೊಟ್ಟಿಲ್ಲ ಎಂದರೆ ರೋಗಿಗಳು ಸಾಯುತ್ತಾರೆ ಎಂದು ಬೆದರಿಕೆ ಹಾಕುತ್ತಾರೆ. ಪರಿಸ್ಥಿತಿ ಹೀಗೆ ಆದರೆ ಹೇಗೆ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ವೆಂಟಿಲೇಟರ್ ಬೆಡ್ ಸಿಗದೆ ಕೊರೋನಾಕ್ಕೆ ಕೊನೆಯಾದ ಹಿರಿಯ ಜೀವ ರಾಜಾರಾಮ್

ಕನಿಷ್ಠ 5-6 ಗಂಟೆ ಮೊದಲೇ ಹೇಳಿ ಎಂದು ತಿಳಿಸಿದ್ದೇವೆ. ಆದರೂ ಹಳೆಯ ತಪ್ಪನ್ನೇ ಮಾಡುತ್ತಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ.