ಕೊರೋನಾ ಲಸಿಕೆ ಪಡೆದುಕೊಂಡ ರೋಹಿಣಿ ಸಿಂಧೂರಿ 'ಅಡ್ಡ ಪರಿಣಾಮ ಇಲ್ಲ'
ಕೊರೋನಾ ಲಸಿಕೆ ಪಡೆದುಕೊಂಡ ರೋಹಿಣಿ ಸಿಂಧೂರಿ/ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ/ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು/ ನಮ್ಮ ದೇಶದ ಲಸಿಕೆಯಿಂದ ಯಾವುದೆ ಅಡ್ಡ ಪರಿಣಾಮ ಇಲ್ಲ
ಮೈಸೂರು(ಫೆ. 08) ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಪಡೆದರು. ಲಸಿಕೆ ಪಡೆದ ನಂತರ ನಿಯಮದಂತೆ 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದು, ವೈದ್ಯಕೀಯ ತಪಾಸಣೆಗೆ ಸ್ಪಂದಿಸಿದರು.
'ರೋಹಿಣಿ ಐಎಎಸ್ ಪಾಸ್ ಮಾಡಿರುವುದೇ ಅನುಮಾನ'
ಬಳಿಕ ಮಾತನಾಡಿದ ಅವರು, ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಅಧಿಕಾರಿ, ಸಿಬ್ಬಂದಿ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಈಗ ನಾನು ಲಸಿಕೆ ಹಾಕಿಸಿಕೊಂಡಿದ್ದು, ಯಾವುದೇ ತೊಂದರೆ ಇಲ್ಲ. ಹಾಗಾಗಿ ಲಸಿಕೆ ಪಡೆದುಕೊಳ್ಳುವರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ. ಅನೇಕ ದೇಶಗಳು ಭಾರತ ಸಿದ್ಧಪಡಿಸಿದ ಲಸಿಕೆ ಪಡೆಯಲು ಮನವಿ ಮಾಡಿದ್ದಾರೆ. ಹೀಗಿರುವಾಗ ನಮ್ಮ ದೇಶದಲ್ಲಿ ಸಂಶೋಧನೆ ಮಾಡಿದ ಲಸಿಕೆ ಬಗ್ಗೆ ಸಂಶಯ ಪಡಬಾರದು ಎಂದು ತಿಳಿಸಿದರು.