Mysuru: ಇರುಮುಡಿ ಹೊತ್ತ ಪುನೀತ್ ಫೋಟೋ ಜೊತೆ ಚಾಮುಂಡೇಶ್ವರಿ ದರ್ಶನ ಪಡೆದ ಅಯ್ಯಪ್ಪ ಭಕ್ತರು

ನಟ ಪುನೀತ್ ರಾಜ್‍ಕುಮಾರ್ (Puneeth Rajkumar)ನಮ್ಮನ್ನಗಲಿ ತಿಂಗಳುಗಳು ಕಳೆದಿವೆ. ಆದರೂ ಅಪ್ಪು ಜನ ಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಪುನೀತ್ ಅವರು ಅಯ್ಯಪ್ಪ ಸ್ವಾಮಿಯ (Ayyappa Devotees) ಭಕ್ತರು. 

Share this Video
  • FB
  • Linkdin
  • Whatsapp

ಮೈಸೂರು (ಜ. 01): ನಟ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ತಿಂಗಳುಗಳು ಕಳೆದಿವೆ. ಆದರೂ ಅಪ್ಪು ಜನ ಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಪುನೀತ್ ಅವರು ಅಯ್ಯಪ್ಪ ಸ್ವಾಮಿಯ ಭಕ್ತರು. ಪ್ರತಿವರ್ಷ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದರು. ಈ ಬಾರಿ ಅವರಿಲ್ಲ. ಆದರೆ ಅವರ ಅಭಿಮಾನಿಗಳು ಅಪ್ಪು ಭಾವಚಿತ್ರದ ಜೊತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ಧಾರೆ. 

ಶಿವಮೊಗ್ಗದಿಂದ ಆಗಮಿಸಿದ್ದ ಅಯ್ಯಪ್ಪ ಭಕ್ತರು, ಅಯ್ಯಪ್ಪನ ಝೇಂಕಾರ ಕೂಗಿ ಭಕ್ತಿ ಸಮರ್ಪಣೆ ಮಾಡಿದರು. 'ಪುನೀತ್ ರಾಜ್‍ಕುಮಾರ್ ಜೊತೆ ಅಯ್ಯಪ್ಪನ ದರ್ಶನ ಮಾಡುವ ಆಸೆ ಇತ್ತು. ಆದರೆ ಇವತ್ತು ಅವರ ಪೋಟೋ ಜೊತೆಗೆ ಸಾಗುತ್ತಿದ್ದೇವೆ. ಮುಂದೆಯೂ ನಾವು ಅವರ ಫೋಟೋ ಜೊತೆಯಲ್ಲಿ ಅಯ್ಯಪ್ಪನ‌ ದರ್ಶನ ಮಾಡುವೆವು' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪುನೀತ್ ಅಭಿಮಾನಿಗಳು ಹೇಳಿದ್ದಾರೆ. 

Related Video