ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ : ಪಕ್ಷಗಳ ರಣತಂತ್ರ

ಮೈಸೂರು ನಗರಪಾಲಿಕೆಯ ಮೇಯರ್‌ ಚುನಾವಣೆಯು ಆ.25 ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.

ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್‌ ಹಾಗೂ ಕಾಂಗ್ರೆಸ್‌ನ ಅನ್ವರ್‌ಬೇಗ್‌ ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದರು. ಚುನಾವಣೆ ವೇಳೆ ಆಸ್ತಿ ವಿವರ ಮುಚ್ಚಿಟ್ಟಿದ್ದರು ಎಂದು ಪ್ರತಿಸ್ಪರ್ಧಿ ರಜನಿ ಅಣ್ಣಯ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾಗಿತ್ತು. ಇದರ ವಿರುದ್ಧ ಅವರು ಹೈಕೋರ್ಟಿನ ಮೆಟ್ಟಿಲೇರಿದ್ದರು. ಅಲ್ಲಿ ಕೂಡ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದರಿಂದ ಮೂರು ತಿಂಗಳ ನಂತರ ರುಕ್ಮಿಣಿ ಮಾದೇಗೌಡರು ಮೇಯರ್‌ ಸ್ಥಾನ ಕಳೆದುಕೊಂಡಿದ್ದರು. ಅಂದಿನಿಂದಲೂ ಉಪ ಮೇಯರ್‌ ಅನ್ವರ್‌ ಬೇಗ್‌ ಅವರು ಪ್ರಭಾರ ಮೇಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಅಧಿಕೃತ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.

First Published Aug 25, 2021, 9:46 AM IST | Last Updated Aug 25, 2021, 10:05 AM IST

ಮೈಸೂರು (ಆ.25):  ಮೈಸೂರು ನಗರಪಾಲಿಕೆಯ ಮೇಯರ್‌ ಚುನಾವಣೆಯು ಇಂದು ಮಧ್ಯಾಹ್ನ 11ಕ್ಕೆ ಮತದಾನ ನಡೆಯಲಿದೆ. ಪ್ರತಿಷ್ಠಿತ ಮೇಯರ್ ಸ್ಥಾನಕ್ಕೆ ಮೂರು ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಮೊದಲ ಬಾರಿ ಮೇಯರ್ ಪಟ್ಟಕ್ಕಾಗಿ ಬಿಜೆಪಿ ಸೆಣಸುತ್ತಿದೆ. ಆದರೆ ಕೈ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಾ ಎನ್ನುವ ಬಗ್ಗೆಯೂ ಅನುಮಾನಗಳಿದೆ.

ಮೈಸೂರು : ರದ್ದಾಗಿದ್ದ ಸದಸ್ಯತ್ವ - ಆ.25 ರಂದು ಮೇಯರ್‌ ಚುನಾವಣೆ