ಚಾಮುಂಡಿ ಬೆಟ್ಟಕ್ಕೆ ಮೊದಲ ದಿನವೇ ಸಾವಿರಾರು ಭಕ್ತರು ಭೇಟಿ
ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ದೇವಾಲಯ 76 ದಿನಗಳ ನಂತರ ಓಪನ್ ಆಗಿದೆ. ಸರ್ಕಾರ ಹಲವು ನಿಬಂಧನೆಗಳನ್ನು ಹೇರಿರುವುದರಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಅರ್ಧದಷ್ಟು ಇಳಿಕೆಯಾಗಿದೆ.
ಮೈಸೂರು(ಜೂ.09): ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ದೇವಾಲಯ 76 ದಿನಗಳ ನಂತರ ಓಪನ್ ಆಗಿದೆ. ಸರ್ಕಾರ ಹಲವು ನಿಬಂಧನೆಗಳನ್ನು ಹೇರಿರುವುದರಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಅರ್ಧದಷ್ಟು ಇಳಿಕೆಯಾಗಿದೆ.
ಮೈಸೂರು ಅರಮನೆಯಲ್ಲಿ ಮೊದಲ ದಿನವೇ 249 ಪ್ರವಾಸಿಗರು
ಮೊದಲ ದಿನವೇ ಸಾವಿರಕ್ಕೂ ಹೆಚ್ಚೂ ಭಕ್ತರು ದೇವಾಲಯಕ್ಕೆ ಭೇಟಿ ಕೊಟ್ಟಿದ್ದು, ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಹೂವು, ಕಾಯಿಗಳನ್ನು ದೇವಲಾಯಕ್ಕೆ ತರುವುದನ್ನು ನಿಷೇಧಿಸಲಾಗಿದ್ದು, ಭಕ್ತರು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಭೇಟಿ ನೀಡುತ್ತಿದ್ದಾರೆ