ಮೈಸೂರು ಅರಮನೆಯಲ್ಲಿ ಮೊದಲ ದಿನವೇ 249 ಪ್ರವಾಸಿಗರು

ಲಾಕ್‌ಡೌನ್‌ನಿಂದಾಗಿ ಕಳೆದ ಹನ್ನೊಂದು ವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದ ವಿಶ್ವವಿಖ್ಯಾತ ಮೈಸೂರು ಅರಮನೆಯು ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಯಿತು.

More than 200 people visits mysore palace on June 8th

ಮೈಸೂರು(ಜೂ.09): ಲಾಕ್‌ಡೌನ್‌ನಿಂದಾಗಿ ಕಳೆದ ಹನ್ನೊಂದು ವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದ ವಿಶ್ವವಿಖ್ಯಾತ ಮೈಸೂರು ಅರಮನೆಯು ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಯಿತು.

ಕೊರೋನಾ ಸೋಂಕು ಹರಡುವ ಭೀತಿಯಿಂದಾಗಿ ಅರಮನೆಗೆ ಪ್ರವಾಸಿಗರ ಪ್ರವೇಶ ನಿರಾಕರಿಸಲಾಗಿತ್ತು. ಸೋಮವಾರ ದೇಶದಾದ್ಯಂತ ಲಾಕ್‌ಡೌನ್‌ ಸಡಿಲಿಸಿದ ಹಿನ್ನೆಲೆಯಲ್ಲಿ ನಗರದ ಅರಮನೆಯನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ಇದಕ್ಕೂ ಮುನ್ನ ಅರಮನೆ ಮಂಡಳಿ ವತಿಯಿಂದ ಅರಮನೆಯ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಚಾಮುಂಡಿ ಬೆಟ್ಟಕ್ಕೆ ಮೊದಲ ದಿನವೇ ಸಾವಿರಾರು ಭಕ್ತರು ಭೇಟಿ

ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ನೇತೃತ್ವದಲ್ಲಿ ಪೂಜೆ ನೆರವೇರಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಸಾಂಕೇತಿಕವಾಗಿ ಚಾಲನೆ ನೀಡಿದರು.

ಸುರಕ್ಷತಾ ಕ್ರಮ:

ಪ್ರವಾಸಿಗರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಟಿಕೆಟ್‌ ಕೌಂಟರ್‌ ಬಳಿ ಬಾಕ್ಸ್‌ ನಿರ್ಮಿಸಲಾಗಿತ್ತು. ಅಲ್ಲದೆ ಅರಮನೆ ಒಳಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪ್ರವಾಸಿಗರಿಗೆ ಸೂಚಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ಮೂಲಕ ಒಳಗೆ ಬಿಡಲಾಯಿತು. ಪೊಲೀಸರು ಪಿಪಿಟಿ ಕಿಟ್‌ ಹಾಕಿಕೊಂಡು ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿದ್ದು ವಿಶೇಷವಾಗಿತ್ತು.

ಪ್ರಯೋಗದ ಹಂತದ ಔಷಧವನ್ನೂ ಕೊರೋನಾ ರೋಗಿಗೆ ನೀಡಲು ಒಪ್ಪಿಗೆ!

ಜೊತೆಗೆ ಅರಮನೆಯ ಒಳಗೆ ಒಮ್ಮೆಗೆ ಕೇವಲ 350 ಮಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ. ಆದರೆ ಸೋಮವಾರದ ಮೊದಲ ದಿನ 249 ಜನರು ಭೇಟಿ ನೀಡಿ ಅರಮನೆ ವೀಕ್ಷಿಸಿ ಹಿಂದಿರುಗಿದರು. ಅಲ್ಲದೆ ಟಿಕೆಟ್‌ ಕೌಂಟರ್‌ನಲ್ಲಿ ಹಣ ಪಡೆಯುವಾಗಲೂ ಸಾಕಷ್ಟುಎಚ್ಚರಿಕೆ ವಹಿಸಲಾಯಿತು.

Latest Videos
Follow Us:
Download App:
  • android
  • ios