ಗದಗ: ಕೊರೋನಾ ಸೋಂಕಿತರಿಗೂ ಮಳೆ ಕಾಟ, ಬೆಡ್‌ ಸಿಗದೆ ಯೋಧನ ತಾಯಿಗೆ ಸಂಕಷ್ಟ

ಕೊರೋನಾ ಸೋಂಕಿತರಿಗೂ ಸಂಕಷ್ಟ ತಂದ ಮಳೆ| ಭಾರೀ ಮಳೆಯಿಂದ ಸೋರುತ್ತಿರುವ ಕೋವಿಡ್‌ ಕೇರ್‌ ಸೆಂಟರ್‌| ಗದಗ ಜಿಲ್ಲೆಯ ಬೆನಕನಕೊಪ್ಪ ಗ್ರಾಮದಲ್ಲಿ ನಡೆದ ಘಟನೆ|  

Share this Video
  • FB
  • Linkdin
  • Whatsapp

ಗದಗ(ಆ.06): ಕೊರೋನಾ ಸೋಂಕಿತರಿಗೂ ಕೂಡ ಮಳೆ ಸಂಕಷ್ಟವನ್ನ ತಂದೊಡ್ಡಿದೆ. ಹೌದು, ಭಾರೀ ಮಳೆಯಿಂದ ಕೋವಿಡ್‌ ಕೇರ್‌ ಸೆಂಟರ್‌ ಸೋರುತ್ತಿರುವ ಘಟನೆ ಜಿಲ್ಲೆಯ ಬೆನಕನಕೊಪ್ಪ ಗ್ರಾಮದಲ್ಲಿ ನಡೆದಿದೆ. ಹೀಗಾಗಿ ಯೋಧನ ತಾಯಿಯೊಬ್ಬರು ಬೆಡ್‌ ಸಿಗದೆ ನರಕಯಾತನೆಯನ್ನ ಅನುಭವಿಸುತ್ತಿದ್ದಾರೆ.

ಮಹಾ ಮಳೆಗೆ ಬೆಚ್ಚಿಬಿದ್ದ ಬೆಳಗಾವಿ, ಮನೆಗಳಿಗೆ ನುಗ್ಗಿದ ನೀರು, ವರುಣನ ಆರ್ಭಟಕ್ಕೆ ಜನ ತತ್ತರ

ಒಂದು ಕಡೆ ನಿರಂತರ ಮಳೆಯಿಂದ ಆಸ್ಪತ್ರೆ ಸೋರುತ್ತಿದೆ, ಮತ್ತೊಂದು ಕಡೆ ಬೆಡ್‌ ಸಿಗದಿದದ್ದರಿಂದ ಹಿರಿಯ ಜೀವ ಅಕ್ಷರಶಹಃ ನಲುಗಿ ಹೋಗಿದೆ. ಈ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ, ಹೀಗಾಗಿ ಕೊರೋನಾ ರೋಗಿಗಳು ಪಡಬಾರದ ಕಷ್ಟಗಳನ್ನ ಎದುರಿಸುತ್ತಿದ್ದಾರೆ.

Related Video