ಗದಗ: ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ತಾಯಿ..!

ಕೊರೋನಾ ವೈರಸ್‌ ಹಾವಳಿಯಿಂದ ಆರಂಭವಾಗದ ಶಾಲೆಗಳು| ಪ್ರೌಢ ಶಿಕ್ಷಣ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ತರಗತಿಗಳನ್ನ ಪ್ರಾರಂಭಿಸಿದ ರಾಜ್ಯ ಸರ್ಕಾರ| ಮಕ್ಕಳ ಶಿಕ್ಷಣಕ್ಕಾಗಿ 20 ಸಾವಿರ ರೂ.ಗೆ ತಾಳಿ ಅಡವಿಟ್ಟು ಟಿವಿ ಖರೀದಿಸಿದ ತಾಯಿ| 

First Published Jul 31, 2020, 11:25 AM IST | Last Updated Jul 31, 2020, 11:36 AM IST

ಗದಗ(ಜು.31): ಮಕ್ಕಳ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ತಾಳಿ ಅಡವಿಟ್ಟು ಟಿವಿ ಖರೀದಿಸಿದ ಘಟನೆ ಜಿಲ್ಲೆಯ ರಡ್ಡೇರ್‌ ನಾಗನೂರು ಗ್ರಾಮದಲ್ಲಿ ನಡೆದಿದೆ. ಕೊರೋನಾ ವೈರಸ್‌ ಹಾವಳಿಯಿಂದ ಶಾಲೆಗಳು ಆರಂಭಬವಾಗಿಲ್ಲ. ಹೀಗಾಗಿ ಪ್ರೌಢ ಶಿಕ್ಷಣ ಮಕ್ಕಳಿಗೆ ರಾಜ್ಯ ಸರ್ಕಾರ ಚಂದನ ವಾಹಿನಿಯಲ್ಲಿ ತರಗತಿಗಳನ್ನ ಪ್ರಾರಂಭಿಸಿದೆ. 

ಅನ್‌ಲಾಕ್ 3.O: ಬಾರ್&ರೆಸ್ಟೋರೆಂಟ್‌ ಓಪನ್‌ಗೆ ಇಲ್ಲ ಅವಕಾಶ..!

ಹೀಗಾಗಿ 7ಮತ್ತು 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ ತಾಯಿ ತನ್ನ ತಾಳಿಯನ್ನೇ ಅಡವಿಟ್ಟಿದ್ದಾಳೆ. 20 ಸಾವಿರ ರೂ.ಗೆ ತಾಳಿಯನ್ನ ಅಡವಿಟ್ಟು ಟಿವಿಯನ್ನ ಖರೀದಿಸಿದ್ದಾಳೆ ಮಹಾತಾಯಿ. 
 

Video Top Stories