Asianet Suvarna News Asianet Suvarna News

ಹಣತೆಗೆ ಚಂದದ ಚಿತ್ತಾರ, ವಿದ್ಯಾರ್ಥಿನಿಯ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್!

Nov 2, 2021, 1:57 PM IST
  • facebook-logo
  • twitter-logo
  • whatsapp-logo

ಉಡುಪಿ (ನ. 02): ದೀಪಗಳ ಹಬ್ಬ ದೀಪಾವಳಿ (Deepavali) ದೀಪ ಹಬ್ಬದ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ದೀಪಾವಳಿಯಲ್ಲಿ ಹಣತೆಗೆ (Diyas) ಭಾರೀ ಡಿಮ್ಯಾಂಡ್. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಮನೆಯ ಬಡತನಕ್ಕೆ ನೆರವಾಗಲು, ವಿದ್ಯಾಭ್ಯಾಸಕ್ಕೆ ನೆರವಾಗಲು ಹಣತೆಗಳಿಗೆ ಚೆಂದದ ಚಿತ್ತಾರ ಮಾಡಿ ಮಾರಾಟ ಮಾಡುತ್ತಿದ್ದಾಳೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪನಂಗಡಿ ನಿವಾಸಿ ರಕ್ಷಾಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವುದೆಂದರೆ ತುಂಬಾ ಇಷ್ಟ. ರಕ್ಷಾ ಆಳ್ವಾಸ್ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಳೆ. ತಂದೆ ದಿವ್ಯಾಂಗ, ತಾಯಿ ಕೂಲಿ ಮಾಡುತ್ತಿದ್ದಾರೆ. ಓದಿನ ಜೊತೆಗೆ ಪೇಯಿಂಟಿಂಗ್ ಮಾಡುತ್ತಿದ್ದಾರೆ. ಇವರು ಮಾಡುವ ಹಣತೆಗೆ ಇದೀಗ ಭಾರೀ ಬೇಡಿಕೆ ಬರುತ್ತಿದೆಯಂತೆ.