ಕಲಬುರಗಿ; ಊರಿನ ಪ್ರೀತಿಗೆ ಪಾತ್ರವಾಗಿದ್ದ ಮಂಗನಿಗೆ ಸಂಪ್ರದಾಯ ಅಂತ್ಯಸಂಸ್ಕಾರ
* ಊರಿನ ಪ್ರೀತಿಗೆ ಪಾತ್ರವಾಗಿದ್ದ ವಾಣರನಿಗೆ ಅಂತ್ಯಕ್ರಿಯೆ
* ಮಂಗನ ಶವಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ, ಕಿರಿಟ ತೊಡಿಸಿ, ಸಂಪ್ರದಾಯಬದ್ದವಾಗಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ
* ಬೀದಿ ನಾಯಿಗಳ ದಾಳಿಗೆ ಸಿಕ್ಕಿ ಪ್ರಾಣ ಕಳೆದುಕೊಂಡ ಮಂಗ
ಕಲಬುರಗಿ (ಸೆ. 23) ಕೋವಿಡ್ ನಂತ್ರ ಸಮಾಜದಲ್ಲಿನ ಹಲವು ಆಚರಣೆ, ಪದ್ದತಿಗಳು ಬದಲಾಗಿವೆ.. ಬಂಧು, ಮಿತ್ರರು ಅಗಲಿದರೂ ಅವರ ಅಂತ್ಯಕ್ರಿಯೆಗೂ ಹೋಗದೇ ವಾಟ್ಸಪನಲ್ಲಿ RIP ಅಂತ ಸಂದೇಶ ಕಳುಹಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಆದ್ರೆ ಇಲ್ಲಿ, ಮನುಷ್ಯ ಅಲ್ಲ, ಮಂಗ ಸತ್ರೂ ಗ್ರಾಮಸ್ಥರೆಲ್ಲಾ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ
ಮಂಗನ ಶವಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ, ಕಿರಿಟ ತೊಡಿಸಿ, ಸಂಪ್ರದಾಯಬದ್ದವಾಗಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.. ಅಷ್ಟೇ ಅಲ್ಲ, ಗ್ರಾಮಸ್ಥರೆಲ್ಲರಿಗೆ ಪ್ರಸಾದ ವ್ಯವಸ್ಥೆ ಸಹ ಮಾಡಿ ಮಂಗನ ಮೇಲೆ ಭಕ್ತಿ ಭಾವ ಮೆರೆದಿದ್ದಾರೆ. ಈ ಮಂಗ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮಸ್ಥರೊಂದಿಗೆ ಕಳೆದ ಕೆಲ ವರ್ಷಗಳಿಂದ ಅವಿನಾಭಾವ ಸಂಬಂಧ ಹೊಂದಿತ್ತು.. ಗ್ರಾಮದ ಇತರೇ ಸಾಕು ಪ್ರಾಣಿಗಳಂತೆ ಎಲ್ಲೆಡೆ ಸುತ್ತಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು.. ಆದ್ರೆ ನಿನ್ನೆ ಬೀದಿನಾಯಿಗಳ ದಾಳಿಯಿಂದ ಮಂಗ ಪ್ರಾಣ ಕಳೆದುಕೊಂಡಾಗ ಅರಳಗುಂಡಗಿ ಗ್ರಾಮಸ್ಥರು ಕಣ್ಣಿರಿನೊಂದಿಗೆ ಈ ರೀತಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾದರಿಯಾಗಿದ್ದಾರೆ.