Hassan: ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಪ್ರಶ್ನೆಯೇ ಇಲ್ಲ..!

*  ಪುರಸಭೆ ಜಾಗದಲ್ಲಿ ವ್ಯಾಪಾರ ಮಾಡಲು ಯಾರಿಗೂ ನಿರ್ಬಂಧ ಇಲ್ಲ
*  ದೇವಸ್ಥಾನದ ಆವರಣದಲ್ಲಿ ಹಿಂದೂ ಆಗಲಿ, ಮುಸ್ಲಿಂ ಆಗಲಿ ಯಾರಿಗೂ ವ್ಯಾಪಾರ ಮಾಡುವ ಅವಕಾಶ 
*  ಪುರಸಭೆ ಟೆಂಡರ್‌ ಕರೆದು ಎಂದಿನಂತೆ ನಡೆಯುತ್ತೆ 

First Published Apr 12, 2022, 12:41 PM IST | Last Updated Apr 12, 2022, 12:41 PM IST

ಹಾಸನ(ಏ.12):  ಜಿಲ್ಲೆಯ ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಪ್ರಶ್ನೆಯೇ ಇಲ್ಲ. ಯಾಕೆಂದ್ರೆ ಅಲ್ಲಿ ದೇವಸ್ಥಾನದ ಆವರಣದಲ್ಲಿ ಹಿಂದೂ ಆಗಲಿ, ಮುಸ್ಲಿಮ್ ಆಗಲಿ ಯಾರಿಗೂ ವ್ಯಾಪಾರ ಮಾಡುವ ಅವಕಾಶ ಇಲ್ಲ. ಪುರಸಭೆ ಜಾಗದಲ್ಲಿ ವ್ಯಾಪಾರ ಮಾಡಲು ಯಾರಿಗೂ ನಿರ್ಬಂಧ ಇಲ್ಲ. ಪುರಸಭೆ ಟೆಂಡರ್‌ ಕರೆದು ಎಂದಿನಂತೆ ನಡೆಯುತ್ತೆ ಎಂದು ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ಹೇಳಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ್ದ ಎಚ್‌.ಡಿ. ರೇವಣ್ಣ ಅವರು, ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲೂ ಕೋಮು ಸಂಘರ್ಷಕ್ಕೆ ಅವಕಾಶ ಕೊಡಬೇಡಿ ಅಂತ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಅಂತ ತಿಳಿಸಿದ್ದರು. 

Hassan: ಬೇಲೂರು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಬಹಿಷ್ಕಾರ, ಹರಾಜಿಗೆ ಗೈರು