Hassan: ಬೇಲೂರು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಬಹಿಷ್ಕಾರ, ಹರಾಜಿಗೆ ಗೈರು

ಕರಾವಳಿ, ಶಿವಮೊಗ್ಗ ಆಯ್ತು ಈಗ ಹಾಸನ ಸರದಿ. ಮಾಜಿ ಸಚಿವ ಎಚ್‌ ಡಿ ರೇವಣ್ಣ ತವರಲ್ಲಿ ಧರ್ಮ ದಂಗಲ್ ಶುರುವಾಗಿದೆ. ಹಾಸನದ ಬೇಲೂರಿನಲ್ಲಿ ಧರ್ಮ ಸಂಘರ್ಷ ಮುಂದುವರೆದಿದೆ. 

First Published Apr 12, 2022, 11:31 AM IST | Last Updated Apr 12, 2022, 11:40 AM IST

ಬೆಂಗಳೂರು (ಏ. 12): ಕರಾವಳಿ, ಶಿವಮೊಗ್ಗ ಆಯ್ತು ಈಗ ಹಾಸನ ಸರದಿ. ಮಾಜಿ ಸಚಿವ ಎಚ್‌ ಡಿ ರೇವಣ್ಣ ತವರಲ್ಲಿ ಧರ್ಮ ದಂಗಲ್ ಶುರುವಾಗಿದೆ. ಹಾಸನದ ಬೇಲೂರಿನಲ್ಲಿ ಧರ್ಮ ಸಂಘರ್ಷ ಮುಂದುವರೆದಿದೆ. 

ಬೇಲೂರು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಬಹಿಷ್ಕಾರ ಹಾಕಲಾಗಿದೆ. ಜಾತ್ರೆಯಲ್ಲಿ ವ್ಯಾಪಾರ ವಹಿವಾಟಿಗೆ ಅಲಿಖಿತ ನಿರ್ಬಂಧ ಹಾಕಲಾಗಿದೆ. ಜಾತ್ರೆ ಮಳಿಗೆ ಜಾಗ ಹರಾಜಿಗೆ ಮುಸ್ಲಿಂ ವ್ಯಾಪಾರಿಗಳು ಗೈರಾಗಿದ್ದಾರೆ. 1.25 ಲಕ್ಷಕ್ಕೆ ಗಿರೀಶ್ ಮತ್ತು ಸಿದ್ಧೇಶ್‌ಗೆ ಮಳಿಗೆ ದಕ್ಕಿದೆ. ಮುಸ್ಲಿಮರಿಗೆ ಮಳಿಗೆ ನೀಡದಿರಲು ಬಿಡ್‌ದಾರರು ನಿರ್ಧರಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌ನವರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.