Yadagiri : ಶವಾಗಾರವಿಲ್ಲದ ಬಗ್ಗೆ Big 3 ವರದಿಯಲ್ಲಿ ಪ್ರಶ್ನಿಸಿದ್ದಕ್ಕೆ ಶಾಸಕರ ಚೇಲಾಗಳಿಂದ ಧಮ್ಕಿ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡುವ ಪರಿಸ್ಥಿತಿಯ ಬಗ್ಗೆ ಬಿಗ್‌ 3 ಮಾಡಿದ ವರದಿಗೆ ಶಾಸಕರ ಬೆಂಬಲಿಗರಿಂದ ಸಾಲು ಸಾಲು ಧಮ್ಕಿ ಬಂದಿದೆ.

Share this Video
  • FB
  • Linkdin
  • Whatsapp

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಕೋಟಿ ಕೋಟಿ ಸುರಿದು ಆಸ್ಪತ್ರೆ ಕಟ್ಟಿದ್ದಾರೆ. ಆದ್ರೆ, ಇಲ್ಲೊಂದು ಶವಗಾರ ಇಲ್ಲದೇ ಇರೋದ್ರಿಂದ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡುವ ಪರಿಸ್ಥಿತಿ ಬಂದಿದೆ. ಮರಣೋತ್ತರ ಪರೀಕ್ಷೆ ಮಾಡಲು ರೂಂ ಇಲ್ಲದೇ ಹೆಣಗಾಡೋ ಪರಿಸ್ಥಿತಿ ಇಲ್ಲಿನ ಆರೋಗ್ಯ ಸಿಬ್ಬಂದಿಗಳದ್ದು. ಮೃತ ದೇಹಗಳನ್ನು 2 ಕಿ.ಮೀಟರ್ ದೂರ ತೆಗೆದುಕೊಂಡು ಹೋಗ್ಬೇಕು. ಜೊತೆಗೆ ವೈದ್ಯಕೀಯ ಸಲಕರಣೆಗಳನ್ನು ತೆಗೆದುಕೊಂಡು ಹೋಗಬೇಕು. ನಂತರವೇ ಇಲ್ಲಿ ಪೋಸ್ಟ್ ಮಾರ್ಟಂ ನಡೆಯೋದು. ಈ ಅಮಾನವೀಯ ಘಟನೆಗೆ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಬಿಗ್ 3 ಸುದ್ದಿ ಪ್ರಸಾರ ಮಾಡಿತ್ತು ಇದಕ್ಕೆ ಯಾದಗಿರಿ ಮತ್ತು ಶಹಾಪುರ ಶಾಸಕರ ಬೆಂಬಲಿಗರು ಧಮ್ಕಿ ಹಾಕಿದ್ದಾರೆ. ಕಾರ್ಯಕ್ರಮ ಪ್ರಸಾರದ ವೇಳೆ ಕೂಡ ಫೋನ್ ನಲ್ಲಿ ಧಮ್ಕಿ ಹಾಕಲಾಗಿದೆ. ಸುವರ್ಣನ್ಯೂಸ್ , ಶಾಸಕ ಬಸಪ್ಪ ದರ್ಶನಾಪುರ ಪಟಾಲಂ ಅವರನ್ನು ಪ್ರಶ್ನೆ ಮಾಡಿದ್ದು ತಪ್ಪಾ? ಎಂಬ ಪ್ರಶ್ನೆಯನ್ನು ಸುವರ್ಣನ್ಯೂಸ್ ಜನರ ಮುಂದಿಡುತ್ತಿದೆ.

Related Video