Asianet Suvarna News Asianet Suvarna News

ಮೇಲುಕೋಟೆ ಚೆಲುವನಾರಾಯಣನಿಗೂ ತಟ್ಟಿದ ಧರ್ಮಸಂಕಟ

ಮುಸ್ಲಿಂ ದಾಳಿ ಕೋರರಿಂದ ದಿವಟಿಗೆ ಸಲಾಂ ಎಂಬ ಹೆಸರು ಬಂದಿದ್ದು, ಸಂಧ್ಯಾರತಿ ಎಂದ ಹೆಸರು ಬದಲಾಯಿಸವಂತೆ ಸ್ಥಾನಿಕರು ಸಲಹೇ ನೀಡಿದ್ದಾರೆ

ಮಂಡ್ಯ (ಏ. 07): ಹಿಜಾಬ್‌, ಹಲಾಲ್‌ ಬಳಿಕ ಹುಟ್ಟಿಕೊಂಡಿರುವ ಆಝಾನ್‌ ವಿವಾದ ರಾಜ್ಯದಲ್ಲಿ ಈಗ ಸದ್ದು ಮಾಡುತ್ತಿದೆ. ಈ ನಡುವೆ ಪ್ರಸಿದ್ಧ ಯಾತ್ರಾಸ್ಥಳ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯಕ್ಕೂ ಧರ್ಮಸಂಕಟ ತಟ್ಟಿದೆ.ದೀವಟಿಗೆ ಸಲಾಂ ಹೆಸರಿನಲ್ಲಿ ನಡೆಯುವ ಆರತಿ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದು, ಹೆಸರು ಬದಲಿಸುವಂತೆ ಒತ್ತಾಯಿಸಲಾಗಿದೆ. ಈ ಬೆನ್ನಲ್ಲೇ ದೇಗುಲ ಆಡಳಿತ ಮಂಡಳಿಯಿಂದ ಜಿಲ್ಲಾಡಳಿತ ವರದಿ ಕೇಳಿದೆ. 

ಇದನ್ನೂ ನೋಡಿ: ಮುಂದುವರೆದ ಧರ್ಮ ಸಂಘರ್ಷ, 'ಮುಸ್ಲಿಮರು ಕೆತ್ತಿದ ವಿಗ್ರಹ ಬೇಡ', ಮಂಡ್ಯದಲ್ಲಿ ಹೊಸ ವಾರ್ ಶುರು..!

ಮುಸ್ಲಿಂ ದಾಳಿ ಕೋರರಿಂದ ದಿವಟಿಗೆ ಸಲಾಂ ಎಂಬ ಹೆಸರು ಬಂದಿದ್ದು, ಸಂಧ್ಯಾರತಿ ಎಂದ ಹೆಸರು ಬದಲಾಯಿಸವಂತೆ ಸ್ಥಾನಿಕರು ಸಲಹೇ ನೀಡಿದ್ದಾರೆ. ಈ ಬೆನಲ್ಲೆ ಇಓ ಹಾಗೂ ಎಸಿಗೆ ಅರ್ಚಕರು ಲಿಖಿತ ರೂಪದಲ್ಲಿ ಅಭಿಪ್ರಾಯ ತಿಳಿಸಿದ್ದಾರೆ. ಸಂಧ್ಯಾರತಿ ಎಂದು ಹೆಸರಿಡುವಂತೆ ದೇಗುಲದ ಸ್ಥಾನಿಕ ಶ್ರೀನಿವಾಸ್‌ ಹೇಳಿದ್ದಾರೆ. 

Video Top Stories