Asianet Suvarna News Asianet Suvarna News

ಕುಸಿಯುವ ಹಂತದಲ್ಲಿ ಶಾಲಾ ಮೇಲ್ಛಾವಣಿ.. ಸಂಜೆ ಆಗ್ತಿದ್ದಂತೆ ಪುಂಡರ ಅಡ್ಡೆಯಾಗುತ್ತೆ ಶಾಲಾ ಮೈದಾನ!

ಆ ಶಾಲೆಯ ಕಟ್ಟಡ ಕಟ್ಟಿ 4 ದಶಕಗಳಾಗುತ್ತ ಬಂದಿದೆ. ಆದರೆ ಶಾಲೆ ಸಮಸ್ಯೆಗಳ ಆಗರವಾಗಿದ್ದು, ಸಾಯಂಕಾಲವಾದರೆ ಪುಂಡ ಪೋಕರಿಗಳ ಅಡ್ಡೆಯಾಗುತ್ತೆ. ಏನದು ಅನ್ನೋದರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
 

ಇದು ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಮತ್ತಿಕೆರೆ ಬಿಬಿಎಂಪಿ ಸರ್ಕಾರಿ ಬಾಲಕಿರ ಪ್ರೌಢ ಶಾಲೆ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪರಿಸ್ಥಿತಿ. ಶಾಲಾ(School) ಕಟ್ಟಡ ಕಟ್ಟಿ 40 ವರ್ಷಗಳೇ ಕಳೆದಿದ್ದು.. 500ಕ್ಕೂ ಅಧಿಕ ವಿದ್ಯಾರ್ಥಿನಿಯರು(Students) ವ್ಯಾಸಂಗ ಮಾಡುತ್ತಿದ್ದಾರೆ. ಆದ್ರೆ ಶಾಲೆಯ ಗೇಟ್ ಬಿದ್ದು ಹೋಗಿ ವರ್ಷಗಳೇ ಕಳೆದಿವೆ. ಶಾಲಾ ಕೊಠಡಿಯ ಮೇಲ್ಛಾವಣಿಯ ಸೀಲಿಂಗ್ ಕಿತ್ತು ಹೋಗಿದ್ದು, ಕೆಳಗೆ ಕುಳಿತು ಮಕ್ಕಳು ಪಾಠ ಕೇಳುವಂತಾಗದೆ. ಶಾಲೆಯ ಗೇಟ್ ಇಲ್ಲದ ಪರಿಣಾಮ ಸಾಯಂಕಾಲ ಆದರೆ ಸಾಕು ಪುಂಡ - ಪೋಕರಿಗಳು ಇಲ್ಲಿಗೆ ಬಂದು ಮಧ್ಯಪಾನ(Drink), ಧೂಮಪಾನ ಮಾಡುತ್ತಾರೆ. ಅಷ್ಟೇ ಅಲ್ಲದೇ ಶಾಲಾ ಸಮಯದಲ್ಲೂ ಅದೆಷ್ಟೋ ಬಾರಿ ಗಲಾಟೆ ಕೂಡ ಮಾಡಿದ್ದಾರಂತೆ. ಇನ್ನೊಂದೆಡೆ ಹೈಸ್ಕೂಲ್ ಜೊತೆಗೆ ಕಾಲೇಜು ಕೂಡ ಇರುವ ಕಾರಣ ಇದೇ ಶಾಲಾ ಕಟ್ಟಡ ಮೇಲೆ ಕಾಲೇಜು ಕಟ್ಟಡ ಕಟ್ಟಲು ಬಿವಿಎಂಪಿ ಮುಂದಾಗಿದೆಯಂತೆ. ಈಗಿರುವ ಕಟ್ಟಡ ಮಳೆಗಾಲದಲ್ಲಿ ಸೋರಿಕೆ ಆಗುತ್ತದೆ. ಸಿಲಿಂಗ್ ಕೂಡ ಕಿತ್ತುಕೊಂಡು ಬರುತ್ತಿದೆ. ಹೀಗಾಗಿ ಕಟ್ಟಡ ಬಗ್ಗೆ ಸರಿಯಾದ ಪರಿಶೀಲನೆ ಮಾಡಿ ಕಟ್ಟಡ ಕಟ್ಟಬೇಕು. ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಕೂಡ ಮಾಡಲಾಗಿದೆ . ಆದ್ರು ಕೂಡ ಯಾರೊಬ್ಬರು ಇತ್ತ ಗಮನ ಹರಿಸುತ್ತಿಲ್ಲ. ಈ ಶಾಲಾ ಮಕ್ಕಳಿಗೆ ಸುರಕ್ಷತೆ ಇಲ್ಲ.. ಮೇಲ್ಛಾವಣಿ ಭಾಗ ಕುಸಿದು ಬೀಳುತ್ತಿರುವುದರಿಂದ ಜೀವ ಭಯದಲ್ಲೆ ಪಾಠ ಕಲಿಯುವಂತಾಗಿದೆ. ಇನ್ನಾದ್ರೂ  ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಮಾನಸಿಕ ವ್ಯಥೆ ಕಾಡಲಿದ್ದು, ದಾಂಪತ್ಯದಲ್ಲಿ ಮನಸ್ತಾಪ ಬರಲಿದೆ

Video Top Stories