ಶಿಕ್ಷಕರ ನೇಮಕಾತಿ ಪರೀಕ್ಷೆ: ಅಕ್ರಮ ತಡೆಯಲು ಮಾಸ್ಟರ್‌ ಪ್ಲಾನ್‌ ರೆಡಿ..!

*  ಮೇ.21,22 ರಂದು ನಡೆಯಲಿರುವ ಶಿಕ್ಷಕರ ನೇಮಕಾತಿ ಪರೀಕ್ಷೆ 
*   ನೇಮಕಾತಿ ಪರೀಕ್ಷೆಯಲ್ಲಿ ಇಎನ್‌ಟಿ ತಜ್ಞ ವೈದ್ಯರ ಬಳಕೆ 
*  ತಜ್ಞರನ್ನೇ ಬಳಸಿಕೊಂಡು ಅಕ್ರಮ ತಡೆಗಟ್ಟೋದಕ್ಕೆ ಪ್ಲಾನ್‌

First Published May 14, 2022, 1:11 PM IST | Last Updated May 14, 2022, 1:11 PM IST

ದಾವಣಗೆರೆ(ಮೇ.14): ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವಂತಹ ಸಾಲು ಸಾಲು ಅಕ್ರಮದಿಂದಾಗಿ ದಾವಣಗೆರೆ ಜಿಲ್ಲಾಡಳಿತ ಹೈಅಲರ್ಟ್‌ ಆಗಿದೆ. ಹೌದು, ಮೇ.21,22 ರಂದು ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದೆ. ಡಿವೈಸ್‌ ಮೂಲಕ ಅಕ್ರಮ ತೆಡೆಗಟ್ಟೋದಕ್ಕೆ ಜಿಲ್ಲಾಡಳಿತ ಹೊಸ ಪ್ಲಾನ್‌ವೊಂದನ್ನ ಮಾಡಿದೆ. ನೇಮಕಾತಿ ಪರೀಕ್ಷೆಯಲ್ಲಿ ಇಎನ್‌ಟಿ ತಜ್ಞ ವೈದ್ಯರನ್ನ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ತಜ್ಞರನ್ನೇ ಬಳಸಿಕೊಂಡು ಅಕ್ರಮ ತಡೆಗಟ್ಟೋದಕ್ಕೆ ಪ್ಲಾನ್‌ ಮಾಡಲಾಗಿದೆ. ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಮೂರು ಪರೀಕ್ಷಾ ಕೇಂದ್ರಗಳಲ್ಲಿ 600 ಅಭ್ಯರ್ಥಿಗಳ ನೋಂದಣಿಯಾಗಿದೆ.