Asianet Suvarna News Asianet Suvarna News

ಮಂಗಳೂರು: ಸ್ಮಾರ್ಟ್ ಸಿಟಿ ಹೆಸರಲ್ಲಿ ಪಾಲಿಕೆ ಎಡವಟ್ಟು, ನಗರ ಸಂಪೂರ್ಣ ತೆರೆಯೋದು ಡೌಟ್!

Jun 29, 2021, 3:40 PM IST

ಮಂಗಳೂರು (ಜೂ. 29): ಪಾಸಿಟಿವಿಟಿ ರೇಟ್ ಇನ್ನೂ ಇಳಿಯದ ಕಾರಣ ಮಂಗಳೂರು ‌ಮಾತ್ರ 50% ದಷ್ಟು‌ ಮಾತ್ರ ಅನ್ ಲಾಕ್ ಆಗಿದ್ದು,‌ ಮುಂದಿನ ವಾರದಿಂದ ಸಂಪೂರ್ಣ ತೆರೆಯುವ ಸಾಧ್ಯತೆಯಿದೆ. ಆದರೆ ಮಂಗಳೂರು ಮಹಾನಗರ ಪಾಲಿಕೆ ‌ಮಾಡಿರೋ ಎಡವಟ್ಟಿನಿಂದ ಪೂರ್ತಿ ಅನ್‌ಲಾಕ್‌ ಆಗುವುದು ಬಹುತೇಕ ಡೌಟ್. 2 ತಿಂಗಳ ಹಿಂದೆ ಲಾಕ್ ಡೌನ್ ಘೋಷಣೆಯಾದಾಗ ‌ಮಹಾನಗರ ಪಾಲಿಕೆ ‌ನಗರದ ಪ್ರಮುಖ ರಸ್ತೆಗಳನ್ನ ಸ್ಮಾರ್ಟ್ ಸಿಟಿ ಹೆಸರಲ್ಲಿ ಏಕಾಏಕಿ ಅಗೆದು ಹಾಕಿದೆ. 

ಬೆಂಗಳೂರಿನಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸಿದ್ಧತೆ, ಮಾಲ್, ದೇವಸ್ಥಾನಕ್ಕೆ ರಿಲೀಫ್ ಸಾಧ್ಯತೆ

ಒನ್ ವೇ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.‌ ಮಂಗಳೂರು ಸಂಪೂರ್ಣ ಓಪನ್ ಆದಲ್ಲಿ ಇಡೀ ನಗರದಲ್ಲಿ ಸಂಚಾರ ಸಮಸ್ಯೆ ಎದುರಾಗೋ ಆತಂಕ ಎದುರಾಗಿದೆ. ನಗರದ ಪ್ರಮುಖ ರಸ್ತೆ ಬಾವುಟಗುಡ್ಡೆ ರಸ್ತೆ ಅಗೆದು ಹಾಕಿ, ಬಲ್ಮಠ ರಸ್ತೆಯಲ್ಲೇ ಒನ್ ವೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಂ.ಜಿ. ರೋಡ್, ಕೆ.ಎಸ್.ರಾವ್ ರಸ್ತೆ, ಬಂಟ್ಸ್ ಹಾಸ್ಟೆಲ್ ರಸ್ತೆ ಸೇರಿ‌ ಎಲ್ಲಾ ಪ್ರಮುಖ ರಸ್ತೆಗಳನ್ನ ಅಗೆದು ಏಕಮುಖ ಸಂಚಾರಕ್ಕೆ ವ್ಯವಸ್ಥೆ ‌ಮಾಡಲಾಗಿದೆ. ಈಗ 50% ಓಪನ್ ಆಗಿರೋದ್ರಿಂದಲೇ ಈ ರಸ್ತೆಗಳಲ್ಲಿ ಟ್ರಾಫಿಕ್ ಜಾಂ ಆಗ್ತಿದ್ದು, ಜನ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.