ಆಂಜನೇಯ ದೇವಸ್ಥಾನವಾಗಿತ್ತಾ ಮಸೀದಿ? ಮಂಡ್ಯದ ಜಾಮಿಯಾ ಮಸೀದಿ ಕಟ್ಟಡ ಹೇಳಿದ ಕಥೆ ಏನು?

*ಈಗಲೂ ಸರ್ಕಾರಿ ಗೆಜೆಟ್​​​​ನಲ್ಲಿರೋ ಉಲ್ಲೇಖವೇನು..? 
*ಜ್ಞಾನವಾಪಿ ಬೆನ್ನಲ್ಲೇ ಶುರುವಾಯ್ತು ಜಾಮಿಯಾ ಗದ್ದಲ
*ನಮ್ಮ ದೇವಸ್ಥಾನ ನಮ್ಮ ಹಕ್ಕು ಎನ್ನುತ್ತಿರೋ ಸಂಘಟನೆಗಳು

Share this Video
  • FB
  • Linkdin
  • Whatsapp

ಮಂಡ್ಯ (ಮೇ 25): ದೇಶದಲ್ಲಿರುವ ಎಲ್ಲ ಮಸೀದಿಗಳು (Masjid) ಒಂದೊಂದು ರಹಸ್ಯವನ್ನು ತುಳಿದಿಟ್ಟುಕೊಂಡಿದ್ದಾವಾ ಅನ್ನೋ ಅನುಮಾನ ಇತ್ತೀಚಿನ ವಿವಾದದಿಂದ ಬರುತ್ತಿದೆ. ದೇಶದಲ್ಲಿರುವ ಅನೇಕ ಮಸೀದಿಗಳ ಕಟ್ಟಡಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ನಿಜಾ ಕೂಡ ಅನಿಸುತ್ತದೆ. ಈಗ ಎದ್ದಿರೋ ವಿವಾದಗಳಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Mandya Jamia Masjid) ಕೂಡ ಸೇರಿಕೊಂಡಿದೆ. ಹಾಗಿದ್ರೆ ಏನಿದು ಜಾಮಿಯಾ ಮಸೀದಿ ವಿವಾದ?

ಶ್ರೀರಂಗ ಪಟ್ಟಣದ (Srirangapatna) ಜಾಮಿಯಾ ಮಸೀದಿ ವಿವಾದವನ್ನು ಕೋರ್ಟ್​​ ಅಂಗಳಕ್ಕೆ ತೆಗೆದುಕೊಂಡು ಹೋಗಲು ಎಲ್ಲ ಸಿದ್ಧತೆ ನಡೆದಿದೆಯಂತೆ. ಅದು ಮಸೀದಿನೇ ಅಲ್ಲ. ಈ ಹಿಂದೆ ಅದು ಹನುಮಂತನ ದೇವಸ್ಥಾನವಾಗಿತ್ತು. ಹಿಂದೂಗಳ ಆಂಜನೇಯ ದೇವಸ್ಥಾನವನ್ನು ಅಕ್ರಮವಾಗಿ ನುಗ್ಗಿ ಮಸೀದಿ ಮಾಡಲಾಗಿದೆ ಎಂದು ಮುತಾಲಿಕ್ (Pramod Muthalik)​​​ ಹೇಳ್ತಾರೆ. ಈ ವಿವಾದ ಮತ್ತು ಆರೋಪ ತುಂಬಾ ವರ್ಷಗಳಿಂದಲೂ ಇದೆ.

ಇದನ್ನೂ ನೋಡಿ:ಜ್ಞಾನವಾಪಿ ಮಸೀದಿ ಒಳಗೇನಿದೆ: ರಿಪೋರ್ಟ್ ಹೇಳಿದ 12 ಸತ್ಯಗಳು!

ಆದರೆ ಈ ಹಿಂದೆ ಯಾರೋ ಒಬ್ಬರು, ಜಾಮಿಯಾ ಮಸೀದಿ ಬಗ್ಗೆ, ಇದು ಮಸೀದಿ ಅಲ್ಲ ದೇವಸ್ಥಾನ ಅಂತ ಒಂದು ಕೂಗು ಹಾಕಿ ಸುಮ್ಮನಾಗುತ್ತಿದ್ದರು. ಕೂಗು ಹಾಕಿದ ಸಂದರ್ಭದಲ್ಲಿ ಒಂದಿಷ್ಟು ಸುದ್ದಿಯಾಗಿ ನಂತರ ಮತ್ತೆ ಯಥಾಸ್ಥಿತಿಯಲ್ಲಿ ಇಲ್ಲಿ ನಡೆಯಬೇಕಾದರ ಕಾರ್ಯಗಳು ನಡೆಯುತ್ತಲೇ ಇದ್ದವು. 

ಆದ್ರೆ ಈ ಬಾರಿ ಇಲ್ಲಿರೋದು ಮಸೀದಿಯಲ್ಲ, ಅದು ಆಂಜನೇಯ ದೇವಸ್ಥಾನ ಎಂದು ಕೂಗುವ ಧ್ವನಿಗಳು ಹೆಚ್ಚಾಗಿವೆ. ಕೇವಲ ಕೂಗು ಮಾತ್ರವಲ್ಲ, ಅಲ್ಲಿ ಪೂಜೆಗೆ ಅವಕಾಶಕ್ಕಾಗಿ ಕೋರ್ಟ್​ ಮೆಟ್ಟಿಲೇರುವ ಎಲ್ಲ ಸಿದ್ಧತೆಗೆಳು ನಡೆದಿವೆ ಎಂದು ಹೇಳಲಾಗುತ್ತಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

Related Video