ಬೆಳಗಾವಿಯಲ್ಲಿ ವರುಣನ ಅಬ್ಬರ: ನದಿಯಲ್ಲಿ ಕೊಚ್ಚಿ ಹೋದ ವೃದ್ಧ ರೈತ..!

* ತುಂಬಿ ಹರಿಯುತ್ತಿರುವ ಮಾರ್ಕಂಡೇಯ ನದಿ
* ಕಾಕತಿ ಸೇತುವೆ ಬಳಿ ನಡೆದ ಘಟನೆ
* ನದಿಯಲ್ಲಿ ಕಾಲು ತೊಳೆಯಲು ಇಳಿದಾಗ ನೀರಿನಲ್ಲಿ ಕೊಚ್ಚಿ ಹೋದ ರೈತ

First Published Jun 19, 2021, 10:44 AM IST | Last Updated Jun 19, 2021, 10:47 AM IST

ಬೆಳಗಾವಿ(ಜೂ.19): ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿ, ಹಳ್ಳ, ಕೊಳ್ಳಗಲು ತುಂಬಿ ಹರಿಯುತ್ತಿವೆ. ಮಾರ್ಕಂಡೇಯ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ವೃದ್ಧನೋರ್ವ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ. ತಾಲೂಕಿನ ಕಾಕತಿ ಸೇತುವೆ ಬಳಿ ರೈತ ಸಿದ್ರಾಯ ಸುತಗಟ್ಟಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ನದಿಯಲ್ಲಿ ಕಾಲು ತೊಳೆಯಲು ಇಳಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕಾಕತಿ ಬಳಿ ವೃದ್ಧನ ಚಪ್ಪಲಿಗಳು ಮಾತ್ರ ಪತ್ತೆಯಾಗಿವೆ. ಕಾಣೆಯಾದ ವೃದ್ಧನಿಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ ಭಾರೀ ಮಳೆ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಭೀತಿ

Video Top Stories