
ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು 32ಕ್ಕೂ ಹೆಚ್ಚು ಪ್ರಕರಣಗಳ ಆಧಾರದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಿಂದ 10 ತಿಂಗಳ ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಪೊಲೀಸರು ತಿಮರೋಡಿ ಮನೆಗೆ ನೋಟಿಸ್ ಅಂಟಿಸಿದ್ದು, ಈ ಗಡಿಪಾರು ಆದೇಶದ ಹಿಂದೆ ಅವರ ಹೋರಾಟದ ರೋಚಕ ಹಾಗೂ ಕರಾಳ ಕಥೆಯಿದೆ
ಸೌಜನ್ಯ ಪರ ಹೋರಾಟಗಾರ ಅಂತಲೇ ಗುರ್ತಿಸಿಕೊಂಡಿರೋ ಮಹೇಶ್ ಶೆಟ್ಟಿ ತಿಮರೋಡಿಯನ್ನ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ, ಪುತ್ತೂರು ಸಹಾಯಕ ಆಯುಕ್ತೆ, ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ.. 20 ವರ್ಷಗಳಲ್ಲಿ, ಬರೋಬ್ಬರಿ 32ಕ್ಕೂ ಹೆಚ್ಚು ಪ್ರಕರಣಗಳನ್ನ ಗಮನಿಸಿ ಈ ಆದೇಶ ಹೊರಡಿಸಲಾಗಿದೆ.. ಆ ಗಡಿಪಾರು ಆದೇಶ, 10 ತಿಂಗಳು ಅನ್ವಯವಾಗಲಿದೆ.
ಗಡಿಪಾರು ಆದೇಶ ಜಾರಿ ಮಾಡೋ ಸಲುವಾಗೊ, ಬೆಳ್ತಂಗಡಿ ಪೊಲೀಸರು ಗುರುವಾರ ತಿಮರೋಡಿ ಮನೆಗೆ ತೆರಳಿದ್ರು.. ಆದ್ರೆ, ಈ ಟೈಮಲ್ಲಿ ತಿಮರೋಡಿ ಮನೆಯಲ್ಲಿ ಇಲ್ಲದ ಕಾರಣ ನೋಟಿಸ್ ಅಂಟಿಸಿ ಮರಳಿದ್ರು.. ಇದರ ಬೆನ್ನಲ್ಲೇ ಗುರುವಾರ ಸಂಜೆ ಉಜಿರೆ ಪೇಟೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಜಾರಿಯಾಗಿರೋ ಬಗ್ಗೆ ಸಾರ್ವಜನಿಕ ಸ್ಥಳದಲ್ಲಿ ಮೈಕ್ ಮೂಲಕ ಘೋಷಣೆ ಮಾಡಿದ್ರು ಪೊಲೀಸರು.
ಈಗ ಮಹೇಶ್ ಶೆಟ್ಟಿ ತಾವೇ ಕಟ್ಟಿದ ಕೋಟೆಯಿಂದ ದೂರವಾಗೋ ಟೈಮ್ ಬಂದಿದೆ.ಆದ್ರೆ, ತಿಮರೋಡಿ ಕಟ್ಟಿದ್ದ ಆ ಸಾಮ್ರಾಜ್ಯ, ಸುಖಾ ಸುಮ್ಮನೆ ಬಂದಿದ್ದಲ್ಲಾ.ಯಾರೋ ಹಾಕಿದ ಬುನಾದಿ ಮೇಲೆ ನಿಂತ ಕೋಟೆ ಅಲ್ಲ.ಅದರ ಕತೆಯೇ ರೋಚಕ.ಅಷ್ಟೇ ಕರಾಳ.