ಅಶ್ವತ್ಥದ ಎಲೆಯಲ್ಲಿ ಅರಳಿದ ಅಪ್ಪುವಿನ ಸಹಜ ನಗು

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ  11 ದಿನಗಳು ಕಳೆದಿದೆ. ಅಪ್ಪು ಅಭಿಮಾನಿಗಳು ದಿನದಿನವೂ ತಮ್ಮ ವಿಭಿನ್ನ ರೀತಿಯ ಅಭಿಮಾನವನ್ನು ಮೆರೆಯುತ್ತಲೇ ಇರುತ್ತಾರೆ. ಕೆಲವರು ಮೈ ಮೇಲೆ ಅಪ್ಪುವಿನ ಹಚ್ಚೆ ಹಾಕಿಸಿಕೊಂಡರೆ ಇದೀಗ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅಶ್ವತ್ಥದ ಎಲೆಯಲ್ಲಿ ಅಪ್ಪುವಿನ ಅಪೂರ್ವ ಕಲಾಕೃತಿಯನ್ನು ರಚಿಸಿದ್ದಾರೆ. ಅಶ್ವತ್ಥದ ಎಲೆಯಲ್ಲಿ ಅಪ್ಪುವನ್ನು  ರಚಿಸಿದ್ದು ಆಗಸದ ಬೆಳಕಿಗೆ ಹಿಡಿದರೆ ಸುಂದರವಾದ ಅಪ್ಪುವಿನ ನಗುಮುಖ ಕಾಣಿಸುತ್ತದೆ.  ಪುನೀತ್ ನಗು ಮುಖದ ಸಹಜತೆಯನ್ನು ಮೂಡಿಸಿದ್ದಾರೆ. ಅಪ್ಪುವಿನ ಅಶ್ವತ್ಥದ ಎಲೆಯ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಈ ಹಿಂದೆ ಹಲವು ಕಲಾಕೃತಿಗಳನ್ನು ಅಶ್ವತ್ಥದ ಎಲೆಯಲ್ಲಿ ಬಿಡಿಸಿದ್ದ ಮಹೇಶ್ ಇದೀಗ ಅಪ್ಪುವನ್ನು ಅರಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್‌ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರನ್ನು ಅಶ್ವತ್ಥದ ಎಲೆಯಲ್ಲಿ ಅರಳಿಸಿದ್ದರು ಮಹೇಶ್.   

Share this Video
  • FB
  • Linkdin
  • Whatsapp

ಉಡುಪಿ (ನ.08):  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ 11 ದಿನಗಳು ಕಳೆದಿದೆ. ಅಪ್ಪು ಅಭಿಮಾನಿಗಳು ದಿನದಿನವೂ ತಮ್ಮ ವಿಭಿನ್ನ ರೀತಿಯ ಅಭಿಮಾನವನ್ನು ಮೆರೆಯುತ್ತಲೇ ಇರುತ್ತಾರೆ. ಕೆಲವರು ಮೈ ಮೇಲೆ ಅಪ್ಪುವಿನ ಹಚ್ಚೆ ಹಾಕಿಸಿಕೊಂಡರೆ ಇದೀಗ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅಶ್ವತ್ಥದ ಎಲೆಯಲ್ಲಿ ಅಪ್ಪುವಿನ ಅಪೂರ್ವ ಕಲಾಕೃತಿಯನ್ನು ರಚಿಸಿದ್ದಾರೆ. 

ಪಾರ್ಕ್‌ಲ್ಲಿ ಆಡೋಕೆ ಬರ್ತಿದ್ದ ಮಕ್ಳಿಗೆ ಸೈಕಲ್, ಸೆಕ್ಯುರಿಟಿ ಮನೆಗೆ ಟಿವಿ: ಕಂಡ ಕಂಡಲ್ಲಿ ಸಹಾಯ ಮಾಡ್ತಿದ್ರು ಅಪ್ಪು

ಅಶ್ವತ್ಥದ ಎಲೆಯಲ್ಲಿ ಅಪ್ಪುವನ್ನು ರಚಿಸಿದ್ದು ಆಗಸದ ಬೆಳಕಿಗೆ ಹಿಡಿದರೆ ಸುಂದರವಾದ ಅಪ್ಪುವಿನ ನಗುಮುಖ ಕಾಣಿಸುತ್ತದೆ. ಪುನೀತ್ ನಗು ಮುಖದ ಸಹಜತೆಯನ್ನು ಮೂಡಿಸಿದ್ದಾರೆ. ಅಪ್ಪುವಿನ ಅಶ್ವತ್ಥದ ಎಲೆಯ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ಹಲವು ಕಲಾಕೃತಿಗಳನ್ನು ಅಶ್ವತ್ಥದ ಎಲೆಯಲ್ಲಿ ಬಿಡಿಸಿದ್ದ ಮಹೇಶ್ ಇದೀಗ ಅಪ್ಪುವನ್ನು ಅರಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್‌ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರನ್ನು ಅಶ್ವತ್ಥದ ಎಲೆಯಲ್ಲಿ ಅರಳಿಸಿದ್ದರು ಮಹೇಶ್.

Related Video