ಮಡಿಕೇರಿ: ಮನೆಯೂ ಇಲ್ಲ, ಕಾಳಜಿ ಕೇಂದ್ರವೂ ಇಲ್ಲ, ಬೀದಿಗೆ ಬಿದ್ದ ಬಾಣಂತಿ, ಹಸುಗೂಸು

ರಾಜ್ಯದಲ್ಲಿ ಮಳೆ ತಗ್ಗಿದೆ, ಆದರೆ ಅವಾಂತರಗಳು ಹೆಚ್ಚಾಗಿದೆ, ಮನೆ ಗೋಡೆ ಕುಸಿದಿದೆ, ಗುಡ್ಡ ಕುಸಿದು ರಸ್ತೆಗೆ ಬರುತ್ತಿದೆ. ಪೊನ್ನಾತ್ ಮೊಟ್ಟೆ ಗ್ರಾಮದಲ್ಲಿ ಪ್ರವಾಹದಿಂದ ತಡೆಗೋಡೆ ಕುಸಿದು 7 ಮನೆಗಳು ನೆಲಸಮವಾಗಿದೆ. ಈ ಮನೆಯಲ್ಲಿದ್ದ ಬಾಣಂತಿ, ಹಸುಗೂಸುಗಳು ಕಾಳಜಿ ಕೇಂದ್ರವೂ ಇಲ್ಲದೇ, ಮನೆಯೂ ಇಲ್ಲದೇ ಬೀದಿಗೆ ಬಂದಿದ್ದಾರೆ.

First Published Jul 19, 2022, 10:53 AM IST | Last Updated Jul 19, 2022, 11:00 AM IST

ಮಡಿಕೇರಿ (ಜು. 19): ರಾಜ್ಯದಲ್ಲಿ ಮಳೆ ತಗ್ಗಿದೆ, ಆದರೆ ಅವಾಂತರಗಳು ಹೆಚ್ಚಾಗಿದೆ, ಮನೆ ಗೋಡೆ ಕುಸಿದಿದೆ, ಗುಡ್ಡ ಕುಸಿದು ರಸ್ತೆಗೆ ಬರುತ್ತಿದೆ. ಪೊನ್ನಾತ್ ಮೊಟ್ಟೆ ಗ್ರಾಮದಲ್ಲಿ ಪ್ರವಾಹದಿಂದ ತಡೆಗೋಡೆ ಕುಸಿದು 7 ಮನೆಗಳು ನೆಲಸಮವಾಗಿದೆ. ಈ ಮನೆಯಲ್ಲಿದ್ದ ಬಾಣಂತಿ, ಹಸುಗೂಸುಗಳು ಕಾಳಜಿ ಕೇಂದ್ರವೂ ಇಲ್ಲದೇ, ಮನೆಯೂ ಇಲ್ಲದೇ ಬೀದಿಗೆ ಬಂದಿದ್ದಾರೆ. ಅತ್ತ ಅಂಗನವಾಡಿಗೆ ಹೋದರೆ ಖಾಲಿ ಮಾಡಲು ಹೇಳುತ್ತಿದ್ದಾರೆ, ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ನೊಟಿಸ್ ನೀಡುತ್ತಿದ್ದಾರೆ. 

Chikkamagaluru: ಕೊಟ್ಟಿಗೆಹಾರ ಹೆದ್ದಾರಿ ಮಧ್ಯದಲ್ಲಿ ಬಿತ್ತು ಹೊಂಡ, ಕಳಪೆ ಕಾಮಗಾರಿ ಬಟಾಬಯಲು!