Asianet Suvarna News Asianet Suvarna News

ಮಂಗಳೂರು;  ದೇವರ ಸ್ಥಾನದಲ್ಲಿ ಬಿಕಿನಿ ಫೋಟೋಶೂಟ್ ಹೊತ್ತಿಸಿದ ಬೆಂಕಿ!

ದೇವರಗುಂಡಿ ಫಾಲ್ಸ್ ಬಳಿ ಅರೆಬೆತ್ತಲೆ ಫೋಟೊಶೂಟ್/ ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದಲ್ಲಿರುವ ಫಾಲ್ಸ್/ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ ದೇವರಗುಂಡಿ ಫಾಲ್ಸ್/  ಬಿಕಿನಿತೊಟ್ಟು ಫಾಲ್ಸ್ ಸುತ್ತಮುತ್ತಾ ಫೋಟೊಶೂಟ್/

Oct 29, 2020, 8:02 PM IST

ಮಂಗಳೂರು(ಅ. 29)  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ದೇವರ ಗುಂಡಿ ಜಲಪಾತದ ಬಳಿ ರೂಪದರ್ಶಿಗಳು ಅರೆಬೆತ್ತಲೆ ಫೋಟೊಶೂಟ್ ನಡೆಸಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಕಿನಿ ಸುಂದರಿಯರ ಕಂಡಾಗ ದೊಡ್ಡವರ ರಿಯಾಕ್ಷನ್

ಸಾಕ್ಷಾತ್ ಪರಶಿವನೇ ಇಲ್ಲಿಗೆ ಸ್ನಾನಕ್ಕೆ ಬರುತ್ತಿದ್ದ ಎಂಬ ನಂಬಿಕೆ ಇದೆ.  ಸುಳ್ಯದ ತೋಡಿಕಾನ ಗ್ರಾಮದ ದೇವರಗುಂಡಿ ಜಲಪಾತದಲ್ಲಿ ಬೆಂಗಳೂರು ಮೂಲದ ಇಬ್ಬರು ರೂಪದರ್ಶಿಗಳು ಅರೆಬೆತ್ತಲೆಯಾಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ ದೇವರಗುಂಡಿ ಫಾಲ್ಸ್ ನಲ್ಲಿ ಇಂಥ ಕೆಲಸ ಮಾಡಲಾಗಿದೆ ಎಂಬ ಆಕ್ರೋಶ ಕೇಳಿಬಂದಿದೆ.