Asianet Suvarna News Asianet Suvarna News

ಮಸೀದಿಗಳಿಗೆ ಬೆದರಿಕೆ ಪತ್ರ ಬರೆದ್ರಾ ಬಿಜೆಪಿ ಶಾಸಕರು?

Jan 18, 2020, 11:37 AM IST

ರಾಯಚೂರು(ಜ.18): ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೆಸರಿನಲ್ಲಿ ಬೆದರಿಕೆ ಪತ್ರಗಳು ರಾಯಚೂರು ನಗರದ ಮಸೀದಿಗಳಿಗೆ ಬಂದಿವೆ. ಲೇಟರ್‌ನಲ್ಲಿ ಹೊಸಪೇಟೆ(ವಿಜಯನಗರ) ಬಿಜೆಪಿ ಶಾಸಕ ಆನಂದ್ ಸಿಂಗ್ ಸಹಿ ಹಾಗೂ ಸೀಲ್‌ ಕೂಡ ಬಳಕೆಯಾಗಿದೆ. 

ಅಂಬಾದೇವಿ ರಥೋತ್ಸವಕ್ಕೆ ಸ್ವಾಗತ ಕೋರುವವರು 'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ'

ಉರ್ದು ಭಾಷೆಯ ಕನ್ನಡ ಅಕ್ಷರಗಳಲ್ಲಿ ಇರುವ ಪತ್ರಗಳು ನಗರದ ಹತ್ತಾರು ಮಸೀದಿಗಳಿಗೆ ಬಂದಿವೆ. ಪತ್ರದಲ್ಲಿ ಆಕ್ಷೇಪಾರ್ಹ ಹಾಗೂ ಬೆದರಿಕೆ ಪದಗಳನ್ನು ಬಳಸಲಾಗಿದೆ. ಈ ಪತ್ರದಲ್ಲಿ 16 ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಸಂಬಂಧ ನಗರದ ವಿವಿಧ ಮಸೀದಿ ಮುಖಂಡರುಗಳಿಂದ ರಾಯಚೂರು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.