Asianet Suvarna News Asianet Suvarna News

ಅಂಬಾದೇವಿ ರಥೋತ್ಸವಕ್ಕೆ ಸ್ವಾಗತ ಕೋರುವವರು 'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ'

ಸನ್ನಿ ಲಿಯೋನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಚಿತ್ರರಂಗಕ್ಕೂ ಬರುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿಯಾಗದ್ದರು. ಇದೀಗ ಈ ಸನ್ನಿಲಿಯೋನ್ ಹೆಸರಿನಲ್ಲಿ ಯುವಕ ಮಂಡಳಿ ಸ್ಥಾಪನೆಯಾಗಿದೆ.'ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ' ಫ್ಲೆಕ್ಸ್ ರಾರಾಜಿಸುತ್ತಿದೆ. ಅದರಲ್ಲಿ 13 ಯುವಕರು ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತುಕೊಂಡ ಚಿತ್ರಗಳಿವೆ. 

mrs sunny leone youth association established Well Comes Banner In raichur
Author
Bengaluru, First Published Jan 15, 2020, 5:12 PM IST
  • Facebook
  • Twitter
  • Whatsapp

ರಾಯಚೂರು, (ಜ.15): ಊರು ಜಾತ್ರೆ, ಹಬ್ಬ ಹರಿದಿನಗಳು ಬಂದ್ರೆ ಹಳ್ಳಿ ಕಡೆಗಳಲ್ಲಿ ಯುವಕರು  ಫ್ಲೆಕ್ಸ್ ಹಾಕಿಸುವುದು ಟ್ರೆಂಡ್ ಆಗ್ಬಿಟ್ಟಿದೆ. ಆದ್ರೆ, ಇಲ್ಲೊಂದು ಗ್ರಾಮದ ಪಡ್ಡೆ ಹುಡುಗರು  ವಿಭಿನ್ನವಾಗಿ ಬ್ಯಾನರ್ ಹಾಕಿಸಿ ಎಲ್ಲರ ಗಮನಸೆಳೆದಿದ್ದಾರೆ.

 ಹಿಂದೆ ಯಾರು ಕೂಡ ಇಂತಹ ಬ್ಯಾನರ್ ಹಾಕಿರಬಾರದು. ಮುಂದೆಯೂ ಬ್ಯಾನರ್ ಹಾಕಬೇಕಾದರೆ ಯೋಚನೆ ಮಾಡ್ಬೇಕೆಂದು ವಿಚಿತ್ರ ಬ್ಯಾನರ್‌ವೊಂದನ್ನು ಹಾಕಿದ್ದಾರೆ.

ಸನ್ನಿ ಲಿಯೋನ್‌ ದಾಂಪತ್ಯ ಜೀವನದಲ್ಲಿ ಸಿಕ್ಕಾಪಟ್ಟೆ ಹ್ಯಾಪಿ ಆಗಿರೋಕೆ ಕಾರಣಾನೇ ಇದು!

ಸಿದ್ದಾಪರ್ವತ ಅಂಬಾದೇವಿ ರಥೋತ್ಸವ ಹಾಗೂ ಕುಂಭೋತ್ಸವಕ್ಕೆ ಸಾರ್ವಜನಿಕರಿಗೆ ಸ್ವಾಗತ ಕೋರುವವರು 'ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ'. ಅರೇ ಇದೇನಿದು ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ ಅಂತ ಅಚ್ಚರಿಯಾದರೂ ನಂಬಲೇಬೇಕು. 

ಹೌದು.. ಮಾದಕ ಬೆಡಗಿ ಸನ್ನಿ ಲಿಯೋನ್ ಅಭಿಮಾನಿಗಳಿಗೇನು ಕಮ್ಮಿ ಇಲ್ಲ. ಆದ್ರೆ,  ಅಭಿಮಾನಿಗಳು ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಅವರಿಗೇನೋ ಒಂಥರಾ ಹಿಂಜರಿಕೆ, ಮುಜುಗರ. 

ಆದರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ ಸ್ಥಾಪನೆಯಾಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. 

ಅಸಹ್ಯ ಟ್ರೋಲ್'ಗಳಿಗೆ ಕಾರಣವಾದ ಸನ್ನಿ ಲಿಯೋನ್ ದಂಪತಿಯ ಚಿತ್ರ

ಹುಡಾ ಗ್ರಾಮದಲ್ಲಿ ಈಗ 'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ' ಫ್ಲೆಕ್ಸ್ ರಾರಾಜಿಸುತ್ತಿದ್ದು,  ಈ ಫ್ಲೆಕ್ಸ್‌ನಲ್ಲಿ ಸನ್ನಿ ಲಿಯೋನ್‌ ಕೆಂಪು ಸೀರೆಯಲ್ಲಿ ಕಂಗೊಳಿಸುತ್ತಿದ್ರೆ, ಮಂಡಳಿಯ ಪದಾಧಿಕಾರಿಗಳು ಪಂಚೆ ತೊಟ್ಟು ಸಾಲಾಗಿ ನಿಂತುಕೊಂಡಿದ್ದಾರೆ. 

ಪಕ್ಕದ ಗ್ರಾಮದಲ್ಲಿ ಅಂಬಾದೇವಿ ಜಾತ್ರಾ ವಿಶೇಷವಾಗಿ ಎಲ್ಲರಿಗೂ ಸ್ವಾಗತ ಕೋರಿ ಈ ಫ್ಲೆಕ್ಸ್ ಹಾಕಿಸಿ ಎಲ್ಲರ ಗಮನಸೆಳೆದಿದ್ದಾರೆ.  ಸನ್ನಿ ಲಿಯೋನ್ ಬಗ್ಗೆ ಗೊತ್ತಿದ್ದವರು ಫ್ಲೆಕ್ಸ್ ನೋಡಿ ಮುಸಿ-ಮುಸಿ ನಗುತ್ತಿದ್ದಾರೆ.

ಜಾತ್ರಾ ವಿಶೇಷ
 ಗ್ರಾಮದಲ್ಲಿ ಜನವರಿ 10 ರಿಂದ 13 ರವರೆಗೆ ಅಂಬಾದೇವಿ ರಥೋತ್ಸವ ಹಾಗೂ ಕುಂಬೋತ್ಸವ ಆಯೋಜಿಸಲಾಗಿತ್ತು. ಜಾತ್ರಾ ಸಂದರ್ಭದಲ್ಲಿ ಹುಟ್ಟಿಕೊಂಡ ಯುವಕ ಸಂಘವು ಫ್ಲೆಕ್ಸ್ ಹಾಕಿಸಿದ್ದು, ಗಮನ ಸೆಳೆದಿದೆ. 

ಶ್ರೀ ಸಿದ್ಧಪರ್ವತ ಅಂಬಾದೇವಿಯ ರಥೋತ್ಸವ ಹಾಗೂ ಕುಂಭೋತ್ಸವಕ್ಕೆ ಸರ್ವರಿಗೂ ಆದರದ ಸುಸ್ವಾಗತ. ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ ಹುಡಾ ಅನ್ನೋ ಫ್ಲೆಕ್ಸ್ ಈಗ ಗ್ರಾಮದಲ್ಲಿ ಎಲ್ಲರನ್ನೂ ಸೆಳೆಯುತ್ತಿದೆ. ಅದರಲ್ಲೂ ಬ್ಯಾನರ್ ನಲ್ಲಿ ಸನ್ನಿ‌ ಪೋಟೋ ನೋಡಿದ ಪೆಡೇ ಹುಡುಗರು ಮಾತ್ರ ನಮ್ಮ ಕನಸಿನ ರಾಣಿಗೆ ನಾವು ಜಾತ್ರೆಯಲ್ಲಿಯೂ ನೋಡಿದ್ದೇವು ಅಂತ ಮನಸ್ಸಿನಲ್ಲಿ ಖುಷಿ ಆಗುತ್ತಿದ್ದಾರೆ. 

ಒಟ್ಟಿನಲ್ಲಿ ದೇವರ ಜಾತ್ರೆಯಲ್ಲಿ ಇಷ್ಟು ದಿನಗಳು ಹೀರೋಗಳ ಜೊತೆಗೆ ಇರುವ ಬ್ಯಾನರ್ ಗಳು ಮಾತ್ರ‌ ಕಾಣಿಸಿಕೊಳ್ಳುತ್ತಿದ್ದವು. ಆದ್ರೆ ಈಗ ಬಾಲಿವುಡ್ ಬೆಡಗಿ ಸನ್ನಿ ಪೋಟೋ ಬ್ಯಾನರ್ ನಲ್ಲಿ ಹಾಕಿ ಜಾತ್ರೆಯ ವಿಶ್ ಮಾಡಿದ್ದು ತುಂಬ ವಿಭಿನ್ನ ಅನ್ನಿಸುತ್ತದೆ.

Follow Us:
Download App:
  • android
  • ios