ಬಳ್ಳಾರಿ: ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ, ಭಕ್ತರ ಮೇಲೆ ಲಾಠಿ ಚಾರ್ಜ್
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಗ್ರಾಮದಲ್ಲಿ ನಡೆದ ಘಟನೆ| ಜಿಲ್ಲೆಯ ಎಲ್ಲ ಜಾತ್ರಾ ಮಹೋತ್ಸವದ ತೇರು ಎಳೆಯಲು ನಿಷೇಧ ಹೇರಿದ ಜಿಲ್ಲಾಡಳಿತ| ಬ್ಯಾರಿಕೇಡ್ ಕಿತ್ತು ತೇರು ಎಳೆಯಲು ಮುಂದಾದಾಗ ಲಾಠಿ ಬೀಸಿದ ಪೊಲೀಸರು|
ಬಳ್ಳಾರಿ(ಏ.14): ಕೊರೋನಾ ನಿಯಮ ಉಲ್ಲಂಘನೆ ಉಲ್ಲಂಘಿಸಿ ಜಾತ್ರೆ ಮಾಡುತ್ತಿದ್ದ ಭಕ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಜಿಲ್ಲೆಯ ತೆಕ್ಕಲಕೋಟೆ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಗ್ರಾಮದ ಕಾಡ ಸಿದ್ದೇಶ್ವರ ಸ್ವಾಮಿಯ ತೇರನ್ನು ಎಳೆಯಲು ಭಕ್ತರು ಮುಂದಾಗಿದ್ದರು.
ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣೆ ಕಾವು: ಘಟಾನುಘಟಿಗಳಿಂದ ಅಬ್ಬರದ ಕ್ಯಾಂಪೇನ್
ಭಕ್ತರ ಒತ್ತಾಯದ ಮೇರೆಗೆ ಐದು ಅಡಿ ಉದ್ದದವರೆಗೂ ತೇರು ಎಳೆಯಲು ಅವಕಾಶ ನೀಡಲಾಗಿತ್ತು. ಆದರೆ, ಜಾತ್ರೆಯ ವೇಳೆ ಕೆಲ ಯುವಕರು ಪ್ರತಿ ವರ್ಷದಂತೆ ನಿಗದಿತ ಸ್ಥಳದವರೆಗೂ ತೇರನ್ನ ಎಳೆಯಲು ಮುಂದಾಗಿದ್ದರು.ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಬ್ಯಾರಿಕೇಡ್ ಕಿತ್ತು ತೇರು ಎಳೆಯಲು ಮುಂದಾದಾಗ ಪೊಲೀಸರು ಲಾಠಿ ಬೀಸಿದ್ದಾರೆ. ಕೆಲ ಭಕ್ತರು ಸೇರಿದಂತೆ ಓರ್ವ ಪೇದೆಗೆ ಗಾಯವಾಗಿದೆ.